Home » ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ವೀಡಿಯೋ ಚಿತ್ರೀಕರಣ!!ಪಾವಂಜೆ ದೇವಾಲಯದಲ್ಲಿ ನಡೆಯಿತು ಪ್ರತೀಕ್ ಶೆಟ್ಟಿಯ ಲವ್ ಮೋಕ್ಟೈಲ್ | ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ ಆಕ್ರೋಶ

ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ವೀಡಿಯೋ ಚಿತ್ರೀಕರಣ!!ಪಾವಂಜೆ ದೇವಾಲಯದಲ್ಲಿ ನಡೆಯಿತು ಪ್ರತೀಕ್ ಶೆಟ್ಟಿಯ ಲವ್ ಮೋಕ್ಟೈಲ್ | ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ ಆಕ್ರೋಶ

0 comments

ಆಧುನಿಕ ಯುಗದಲ್ಲಿ ಎತ್ತ ಕಣ್ಣು ಹಾಯಿಸಿದರೂ ಅತ್ಯುನ್ನತ ಪ್ರತಿಭೆಗಳು. ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶಗಳಿದ್ದೋ, ಇಲ್ಲದೆಯೋ ಅನೇಕರು ಕೆಲವೊಂದು ಪ್ರತಿಭೆಗಳನ್ನು ಟಿಕ್ ಟಾಕ್ ಅಥವಾ ಇನ್ನಿತರಗಳಲ್ಲಿ ಪ್ರದರ್ಶಿಸಿ ಬೆಳಕಿಗೆ ಬಂದಿದ್ದಾರೆ.ಇತ್ತೀಚೆಗೆ ಮೀನು ವ್ಯಾಪಾರಿಯೊಬ್ಬ ಕಟೀಲು ದೇವಿಯ ಭಕ್ತಿಗೀತೆಯ ರಾಗದಲ್ಲಿ ತನ್ನ ಸ್ವಂತ ಸಂಯೋಜನೆಯನ್ನು, ತನಗಿಷ್ಟ ಬಂದ ಸಾಹಿತ್ಯದಲ್ಲಿ ಹಾಡಿ,ಆ ಬಳಿಕ ಕ್ಷಮೆ ಕೇಳಿದ ಘಟನೆ ಮಾಸುವ ಮುನ್ನವೇ, ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು,ತನ್ನ ಅಗಾಧವಾದ ಪ್ರತಿಭೆ ಪ್ರದರ್ಶಿಸುವ ಸಲುವಾಗಿ ಪ್ರತೀಕ್ ಶೆಟ್ಟಿ ಎನ್ನುವಾತ ಇಬ್ಬರು ಅರೆಬರೇ ಬಟ್ಟೆ ತೊಟ್ಟ ಯುವತಿಯರೊಂದಿಗೆ ಇತಿಹಾಸ ಪ್ರಸಿದ್ಧ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದ ಒಳಾಂಗಣ ಸುತ್ತು ಪೌಳಿಯಲ್ಲಿ ವಿಡಿಯೋ ಒಂದನ್ನು ಚಿತ್ರೀಕರಣ ಮಾಡಿದ್ದೂ, ಅದರಲ್ಲಿ ಅಸಭ್ಯವಾಗಿ, ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದು, ದೇವಾಲಯದ ಪಾವಿತ್ರ್ಯ ತೆಗೆ ಧಕ್ಕೆ ತರುವಂತಹ ಕಿಡಿಗೇಡಿತನ ಪ್ರದರ್ಶಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವಿಶಾಲವಾದ ಭಕ್ತ ಸಮೂಹವನ್ನು ಸಲಹುತ್ತಿರುವ, ಇತಿಹಾಸ ಪ್ರಸಿದ್ಧ ಪಾವಂಜೆ ದೇವಾಲಯದಲ್ಲಿ ಇಂತಹ ವೀಡಿಯೋ ಚಿತ್ರೀಕರಣ ಮಾಡಿದ್ದೂ ಅನುಮತಿ ಇದ್ದೋ, ಇಲ್ಲದೆಯೋ ಎಂಬುವುದಕ್ಕೆ ಆಡಳಿತ ಮಂಡಳಿಯೇ ಉತ್ತರಿಸಬೇಕಾಗಿದೆ.

ವೀಡಿಯೋ ತುಣುಕುಗಳು?

https://youtube.com/shorts/WEvgsTaaBns?feature=share

https://youtube.com/shorts/WJIBC9FQYtI?feature=share

https://youtube.com/shorts/nF_-MlPrepQ?feature=share

ಸದ್ಯ ಈತನ ಈ ಅವಾತರದಿಂದಾಗಿ ಇಡೀ ಭಕ್ತ ಸಮೂಹವೇ ಕೆಂಡವಾಗಿದ್ದು ಮುಂದೆ ಇಂತಹ ಘಟನೆ ಮರುಕಳಿಸದಂತೆ ಸಂಬಂಧಪಟ್ಟವರು ಯಾವ ಕ್ರಮ ಕೈಗೊಳ್ಳುವರೆಂಬುವುದನ್ನು ಕಾದುನೋಡಬೇಕಾಗಿದೆ.

You may also like

Leave a Comment