Home » ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆಯ ಊಟ ವಿಷಯ; ಬಿಗ್‌ಶಾಕ್‌ ನೀಡಿದ ಕಾರಾಗೃಹ ಅಧಿಕಾರಿಗಳು

ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆಯ ಊಟ ವಿಷಯ; ಬಿಗ್‌ಶಾಕ್‌ ನೀಡಿದ ಕಾರಾಗೃಹ ಅಧಿಕಾರಿಗಳು

0 comments
Darshan-Pavithra Gowda

ಬೆಂಗಳೂರು: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಕುರಿತಂತೆ ಎ1 ಆರೋಪಿ ಪವಿತ್ರಾ ಗೌಡ ಅವರು ಕಾರಾಗೃಹದಲ್ಲಿ ಮನೆ ಊಟ ಕೇಳಿದ್ದು, ಇದಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು.

ಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಕಾರಾಗೃಹ ಇಲಾಖೆ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಲಿದ್ದಾರೆ.

ಜೈಲಿನಲ್ಲಿ ನೀಡುವ ಆಹಾರದಿಂದ ಯಾರಿಗೂ ತೊಂದರೆಯಾಗಿಲ್ಲ. ಜೈಲಿನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಹಾಗಾಗಿ ಪವಿತ್ರಾ ಗೌಡಗೆ ಮನೆ ಊಟ ಅವಕಾಶ ನೀಡದಂತೆ ಮೇಲ್ಮನವಿ ಸಲ್ಲಿಸಲಾಗುವುದು. ಈಗಾಗಲೇ ಜೈಲಿನ ಅಧಿಕಾರಿಗಳು ಎಸ್‌ಪಿಪಿ ಜೊತೆ ಚರ್ಚೆ ಮಾಡಿದ್ದಾರೆ.

ಸೋಮವಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಪವಿತ್ರಾಗೌಡ ಸೇರಿದಂತೆ ಮನೆ ಊಟ ಕೇಳಿದ್ದ ಇತರೆ ಕೈದಿಗಳಿಗೂ ಸಂಕಟ ಶುರುವಾಗಿದೆ.

You may also like