6
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಅವರು ಪೂರ್ಣಾವಧಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು, ಇವರಿಬ್ಬರ ಭೇಟಿ ಆಗಿ ಆರು ತಿಂಗಳೇ ಹೆಚ್ಚಾಗಿದೆ. ಆದರೀಗ ಜೈಲಿನಿದ ಹೊರ ಬಂದ ನಂತರ ಮೊದಲ ಬಾರಿಗೆ ಇಬ್ಬರೂ ಕೋರ್ಟ್ ಆವರಣದಲ್ಲಿ ಭೇಟಿಯಾಗಲಿದ್ದಾರೆ.
ಜನವರಿ 10 ರಂದು ಶುಕ್ರವಾರ ಪವಿತ್ರಾ, ದರ್ಶನ್ ಕೋರ್ಟ್‌ಗೆ ಹಾಜರಾಗಬೇಕಿದೆ. ಎಲ್ಲಾ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರಾಗಬೇಕಾಗಿರುವುದರಿಂದ ಇವರಿಬ್ಬರು ಕೂಡಾ ಮುಖಾಮುಖಯಾಗಲಿದ್ದಾರೆ.
ಬೆಂಗಳೂರು ಬಿಟ್ಟು ಹೊರ ರಾಜ್ಯಗಳಿಗೆ ಆರೋಪಿಗಳು ಭೇಟಿ ನೀಡುವಂತಿಲ್ಲ. ಕೋರ್ಟ್ ಅನುಮತಿ ಪಡೆಯದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ತಿಂಗಳಿಗೊಮ್ಮೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕು. ಈ ಕಾರಣದಿಂದ ನಾಳೆ ಎಲ್ಲಾ ಆರೋಪಿಗಳು ಕೋರ್ಟ್ ಆದೇಶದಂತೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
