5
Pavitra Gowda: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಂ.1 ಆಗಿರುವ ಪವಿತ್ರಾ ಗೌಡ ಅವರು ಜೈಲಿನಿಂದ ಹೊರಬಂದು ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್‌ನ್ನು ಮಾಡಿದ್ದಾರೆ.
ಪವಿತ್ರಾ ಗೌಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಚಿತ್ರವನ್ನು ಹಾಕಿದ್ದು, ರಹಸ್ಯ ಸಂದೇಶವೊಂದನ್ನು ಬರೆದು ಹಾಕಿದ್ದಾರೆ. ಅದೇನೆಂದರೆ ” ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು” ಎಂದು ಪೋಸ್ಟ್ ಮಾಡಿದ್ದಾರೆ.
ʼಕಾಣದ ಕೈಗಳುʼ ಯಾವುದು ಎಂಬ ಪ್ರಶ್ನೆಯನ್ನು ಈ ಪೋಸ್ಟ್‌ಗೆ ಹಲವು ಕಮೆಂಟ್ ಮಾಡಿದ್ದಾರೆ. ಹಾಗೆನೇ ಈ ಪೋಸ್ಟನ್ನು ಶೇರ್‌ಮಾಡಿದ ದರ್ಶನ್ ಅಭಿಮಾನಿಗಳು ನ್ಯಾಯ ಸಿಗುತ್ತದೆ ಎಂದು ಬರೆದಿದ್ದಾರೆ.
