Home Ministry: ಮಂಗಳೂರಿನಲ್ಲ ಇತ್ತೀಚೆಗೆ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳು, ಹಾಗೂ ಈ ಭಾಗದಲ್ಲಿ ಇತ್ತಿಚಿಗೆ ನಡೆದ ಕೊಲೆಗಳ ವಿಚಾರವಾಘಿ ರಾಜ್ಯ ಗೃಹ ಸಚಿವ ಪರಮೇಶವರ್ ಅವರು ಮಂಗಳೂರಿಗೆ ಭೇಟಿ ನೀಡಿ, ಶಾಂತಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಈಲ್ಲಿ ನಡೆಯುತ್ತಿರುವ ಘಟನೆಗಳ ಸ್ಪೆಷಲ್ ಪೋರ್ಸ್ ಮಾಡೊದಾಗಿ ಹೇಳಿದ್ದೆವು. ಆ್ಯಂಟಿ ಕಮ್ಯೂನಲ್ ಪೋರ್ಸ್ ಮಾಡಿದ್ದೇವೆ. ಶಾಂತಿ ಸಭೆ ಮಾಡಬೇಕೆನ್ನುವ ಸಲಹೆ ಬಂದಿತ್ತು. ಹಾಗಾಗಿ ನಿನ್ನೆ ಶಾಂತಿ ಸಭೆ ಮಾಡಿದ್ದೇವೆ. ಸಭೆಯಲ್ಲಿ ಶಾಸಕರು, ಸಂಸತ್ ಸದಸ್ಯರು, ಎಲ್ಲಾ ಪಕ್ಷದ ಅಧ್ಯಕ್ಷರು, ಸಂಘ ಸಂಸ್ಥೆಯವರು, ಧಾರ್ಮಿಕ ನಾಯಕರು ಭಾಗಿಯಾಗಿದ್ದರು ಎಂದರು.
ಸಭೆಯಲ್ಲಿ 40 ಜನ ಮಾತನಾಡಿದ್ದು, ಸಭೆ ಬಹುತೇಕ 4:30 ಗಂಟೆ ಕಾಲ ನಡೆದಿದೆ. ಉತ್ತಮವಾದ ಸಲಹೆಗಳು ಬಂದಿವೆ. ಮತ್ತೆ ದೊಡ್ಡ ಸಭೆಯನ್ನ ಮಾಡೋಣ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಪೊಸ್ಟಿಂಗ್ ನಿಲ್ಲಬೇಕೆಂದಿದ್ದೇವೆ. ಸುಳ್ಳು ಸುದ್ದಿಗೆ ಕಾನೂನು ತರಲಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನು ಜಾರಿಗೆ ಬರಲಿದೆ. ಕರಾವಳಿ ಪ್ರದೇಶದಲ್ಲಿ ಕಲೆ ಸಂಸ್ಕೃತಿ ರಕ್ಷಣೆಯಾಗಬೇಕು. ಈಗ ಸದ್ಯ ಶಾಂತಿಯತ್ತ ಜನ ಗಮನ ಹರಿಸಿದ್ದಾರೆ ಎಂದರು.
ಕೋಮು ಸೂಕ್ಷ್ಮ ಜಿಲ್ಲೆ ಎಂದು ಕರೆಯಬೇಡಿ ಎಂದು ಬಿಜೆಪಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ಮಾಫೀಯಾ, ಕ್ರೈಮ್ ಬಗ್ಗೆ ಹೇಳಿದ್ದಾರೆ. ಮರಳು, ಕೆಂಪು ಕಲ್ಲು ಮಾಫಿಯಾ ಇದೆ. ಸಂಭಂದ ಪಟ್ಟಂತ ಇಲಾಖೆಗೆ ನಾವು ಸೂಚನೆ ಕೊಟ್ಟಿದ್ದೇವೆ. ಈ ಘಟನೆಗಳಿಗೆ ಕ್ರೈಂ ಕಾರಣ ಅಂತ ಹೇಳಿದ್ರು. ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿ ಡ್ರಗ್ಸ್ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಆಂಟಿ ಡ್ರಗ್ ಸಮಿತಿ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಮರಳು ಮಾಫಿಯಾ ಬಗ್ಗೆ ಸಭೆಯಲ್ಲಿ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕೂಡ ಮಾಫಿಯಾ ಇದೆ ಅದು ಕೂಡ ದೊಡ್ಡ ಮಟ್ಟದಲ್ಲಿ ಇದೆ ಅಂತ ಗಮನಕ್ಕೆ ತಂದಿದ್ದಾರೆ. ಇದೆಲ್ಲವನ್ನ ನಿಯಂತ್ರಣ ಮಾಡ್ಲಿಕ್ಕೆ ಇಲಾಖೆಗೆ ತಿಳಿಸಿದ್ದೇವೆ.
ಇನ್ನು ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ವಿಚಾರವಾಗಿ ಪ್ರತಿಕೃಯಿಸಿದ ಗೃಹ ಸಚಿವರು ಅದೆಲ್ಲವನ್ನು ಪೊಲೀಸರು ಗಮನಿಸುತ್ತಿದ್ದಾರೆ. ಯಾರೋ ಒಬ್ಬ ವ್ಯಕ್ತಿ ಪರವಾಗಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಈ ಪ್ರಕರಣದ ದೂರುದಾರ ಯಾರಿದ್ದಾರೋ ಅವರೇ ಪ್ರತಿಕ್ರಿಯೆ ಕೊಡಬೇಕು. ನಾಳೆ ಕಾನೂನಿನ ಪ್ರಕ್ರಿಯೆಯಲ್ಲಿ ಟೆಕ್ನಿಕಲ್ ಗ್ರೌಂಡ್ಸ್ ನಲ್ಲಿ ಕೇಸ್ ಬಿದ್ದು ಹೋಗುತ್ತೆ ಅದೆಲ್ಲ ಆಗಬಾರದು. ಆತ ಕಂಪ್ಲೀಟ್ ಕೊಡಬೇಕು, ಹೇಳಿಕೆ ಕೊಡಬೇಕು, ಕಾನೂನಿನ ಚೌಕಟ್ಟಿನಲ್ಲಿ ಅದಾದ ಬಳಿಕ ನಾವು ತನಿಖೆ ಮಾಡ್ತೇವೆ ಎಂದರು.
ಇದನ್ನೂ ಓದಿ: Street Dogs: ಬೀದಿ ನಾಯಿಗಳಿಗೆ ಬಾಡೂಟದ ಭಾಗ್ಯ – ಕಾಂಗ್ರೆಸ್ ಸರ್ಕಾರದಿಂದ ನಾಯಿಗಳಿಗೂ ಗ್ಯಾರಂಟಿ ಯೋಜನೆ
