Home » Udupi: ಪೇಜಾವರ ಸ್ವಾಮಿ ದೇಶ ಬಿಟ್ಟು ಹೋಗಲಿ: ಜಯನ್ ಮಲ್ಪೆ

Udupi: ಪೇಜಾವರ ಸ್ವಾಮಿ ದೇಶ ಬಿಟ್ಟು ಹೋಗಲಿ: ಜಯನ್ ಮಲ್ಪೆ

16 comments

Udupi: ಉಡುಪಿಯ (Udupi) ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನವನ್ನು ಒಪ್ಪದ ಕಾರಣ ದೇಶ ಬಿಟ್ಟು ಹೋಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಹೌದು, ಮಂಗಳವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ 75ನೇ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ವೇಳೆ
ಅಂಬೇಡ್ಕರ್ ಬರೆದ ಸಂವಿಧಾನ ಉಳಿದರೆ ಮಾತ್ರ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರು ಸುರಕ್ಷಿತವಾಗಿರುತ್ತೇವೆ. ಇದರ ಹೊರತು ನಾವೆಲ್ಲರೂ ನಾಶವಾಗುತ್ತೇವೆ ಎಂಬುದನ್ನು ಪೇಜಾವರ ಸ್ವಾಮೀಜಿ ಅರ್ಥಮಾಡಿಕೊಳ್ಳಲಿ ಎಂದು ಜಯನ್ ಮಲ್ಪೆ ಹೇಳಿದ್ದಾರೆ.

ಭಾರತವೆಂದರೆ ವೈದಿಕ ಹಿಂದೂ ದೇಶ ಮಾಡಲು ಹೊರಟಿರುವ ಪೇಜಾವರ ಸ್ವಾಮೀಜಿ, ಈಗಿನ ಸಂವಿಧಾನ ಹೋಗಿ, ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಾಗಿದೆ ಎನ್ನುವ ಮೂಲಕ ನಮ್ಮ ಸಂವಿಧಾನದ ಆಶಯಕ್ಕೆ ಗುಂಡು ಹೊಡೆದು ಈ ದೇಶವನ್ನು ನಾಶಮಾಡಲು ಸಂಚು ನಡೆಸಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.

You may also like

Leave a Comment