Home » Udupi: ಪೇಜಾವರ ಶ್ರೀ ಗಳಿಗೆ ಅವಾಚ್ಯ ಪದಗಳಿಂದ ನಿಂದನೆ, ಜೀವ ಬೆದರಿಕೆ

Udupi: ಪೇಜಾವರ ಶ್ರೀ ಗಳಿಗೆ ಅವಾಚ್ಯ ಪದಗಳಿಂದ ನಿಂದನೆ, ಜೀವ ಬೆದರಿಕೆ

0 comments

Udupi: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಉಡುಪಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಭೀಮ್‌ ಆರ್ಮಿ ಸಂಘಟನೆಯ ಮತಿನ್‌ ಕುಮಾರ್‌ ಬಿಜಾಪುರ ಎಂಬುವವರ ವಿರುದ್ಧ ಕಾರ್ಕಳ ತಾಲ್ಲೂಕು ಬಜಗೋಳಿ ಮುಡಾರು ಗ್ರಾಮದ ಹರೀಶ್‌ ದೂರು ನೀಡಿದ್ದಾರೆ.

ಸುಮ್ಮನೆ ಕೂತರೆ ಸರಿ, ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ್‌ ಕೊರೆಗಾಂವ್‌ ಯುದ್ಧ ಉಡುಪಿ ಮಠದ ಮುಂದೆ ಆಗುತ್ತದೆ ಎಂದು ಹೇಳುತ್ತಾ, ಪೇಜಾವರ ಶ್ರೀಗಳನ್ನು ಅವಾಚ್ಯವಾಗಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆ. ಒಂದು ಒಂದು ದಿನ ಯುದ್ಧ ನಡೆಯುತ್ತದೆ ಎಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಪ್ರಚೋದಿಸುವ ಹೇಳಿಕೆಯನ್ನು ನೀಡಿರುವ ಕುರಿತು ಪ್ರಕರಣ ದಾಖಲಾಗಿದೆ.

You may also like

Leave a Comment