Pension : ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು ಹಿರಿಯ ನಾಗರೀಕರು ಆ ಒಂದು ಸರ್ಟಿಫಿಕೇಟ್ ಸಲ್ಲಿಸದಿದ್ರೆ ಪಿಂಚಣಿ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಪಿಂಚಣಿ(Pension) ಪಡೆಯಲು ಜೀವನ್ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಸರ್ಕಾರ ತಿಳಿಸಿದೆ. ಅದೂ ಅಲ್ಲದೆ ಅಕ್ಟೋಬರ್ನಿಂದಲೇ ಪಿಂಚಣಿ ಪಡೆಯೋಕೆ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ಕಡ್ಡಾಯವಾಗಿ ಈ ಸರ್ಟಿಫಿಕೇಟ್ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.
2024ರ ಅಕ್ಟೋಬರ್ 1ನೇ ತಾರೀಕಿನಿಂದಲೇ ನೀವು ಲೈಫ್ ಸರ್ಟಿಫಿಕೇಟ್ ಸಲ್ಲಿಸಿದರೆ ಮುಂದಿನ ವರ್ಷ ನವೆಂಬರ್ ತಿಂಗಳವರೆಗೆ ಚಾಲ್ತಿಯಲ್ಲಿ ಇರಲಿದೆ. ಮತ್ತೆ ಮುಂದಿನ ವರ್ಷ ಈ ದಾಖಲೆ ಸಲ್ಲಿಸಲೇಬೇಕು ಎಂಬುದು ಈಗಿರುವ ನಿಯಮ. ಇನ್ನೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಆಧಾರ್ ಸಂಖ್ಯೆ, ಪಿಪಿಒ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ನೀಡಬೇಕು. ಈ ದಾಖಲೆಗಳನ್ನು ನೀಡುವ ಮೂಲಕ ಲೈಫ್ ಸರ್ಟಿಫಿಕೆಟ್ ಸಲ್ಲಿಸಬಹುದು.
