Home » ಜನರಿಗೆ ಮತ್ತೆ ಮೆಟ್ರೋ ದರ ಏರಿಕೆಯ ಬಿಸಿ

ಜನರಿಗೆ ಮತ್ತೆ ಮೆಟ್ರೋ ದರ ಏರಿಕೆಯ ಬಿಸಿ

0 comments

ಬೆಂಗಳೂರು: ಕಳೆದ ವರ್ಷ ಶೇ.71ರವ ರೆಗೆ ಮೆಟ್ರೊ ಪ್ರಯಾಣ ದರ ಏರಿಕೆಯಿಂದ ಆಘಾತಕ್ಕೆ ಗುರಿಯಾಗಿದ್ದ ಪ್ರಯಾಣಿಕರಿಗೆ ‘ಬಿಎಂಆರ್‌ಸಿಎಲ್’ ಮುಂದಿನ ತಿಂಗಳು ಮತ್ತೊಂದು ಸುತ್ತಿನ ದರ ಏರಿಕೆ ಶಾಕ್ ನೀಡುವ ಸಾಧ್ಯತೆಯಿದೆ. ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸಿನಂತೆ ಫೆಬ್ರವರಿಯಲ್ಲಿ ಮೆಟ್ರೊ ಪ್ರಯಾಣ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಪ್ರತಿ ವರ್ಷ ಮೆಟ್ರೊ ಪ್ರಯಾಣದ ಟಿಕೆಟ್ ದರದಲ್ಲಿ ಶೇ.5ರಷ್ಟು ಹೆಚ್ಚಳವಾಗಬೇಕೆಂಬ ‘ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸಿನ ಅನ್ವಯ, ಬಿಎಂಆರ್‌ಸಿಎಲ್ ಫೆಬ್ರವರಿಯಲ್ಲಿ ದರ ಪರಿಷ್ಕರಣೆ ಮಾಡಬೇಕಿದೆ.

ಕಳೆದ ವರ್ಷವಷ್ಟೇ ಪ್ರಯಾಣ ದರ ಶೇ.71ರವರೆಗೆ ಹೆಚ್ಚಿಸಿ, ದೇಶದ ಅತ್ಯಂತ ದುಬಾರಿ ಮೆಟ್ರೊ ಎಂಬ ಟೀಕೆಗೆ ಬಿಎಂಆರ್‌ಸಿಎಲ್ ಗುರಿಯಾಗಿತ್ತು. ಇದು ಮೆಟ್ರೊ ಬಳಕೆದಾರರು ಹಾಗೂ ರಾಜಧಾನಿಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

 

You may also like