Viral Video : ಉತ್ತರ ಪ್ರದೇಶದ ಇಲ್ಲಿನ ಸಿಮೌಲಿ ಗ್ರಾಮದ ರೈತರೊಬ್ಬರ ಮನೆಯಂಗಳದಲ್ಲಿ ಒಮ್ಮೆಲೆ 100ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿದ್ದು, ಎಲ್ಲರಲ್ಲಿಯೂ ಗಾಬರಿ ಮೂಡಿಸಿದೆ.
मेरठ के समौली गांव में एक भाईजान के घेर मे एक दो नहीं पूरे 52 सांप निकले। सभी सांप (चेकर्ड कीलबैक वाटर स्नैक) प्रजाति के प्रतीत हो रहें थे जो जहरीले नहीं होते। इसके बावजूद भाईजान ने सभी 52 सांपों को लाठी से पीट पीट कर मार दिया। pic.twitter.com/PSUVD1J4yt
— shalu agrawal (@shaluagrawal3) June 2, 2025
ಹೌದು, ಸಿಮೌಲಿ ಗ್ರಾಮದ ರೈತರೊಬ್ಬರ ಮನೆಯಂಗಳದಲ್ಲಿ ಇದ್ದಕ್ಕಿದ್ದಂತೆ ಹಾವುಗಳು ಪ್ರತ್ಯಕ್ಷ ವಾಗಿವೆ. ಹಾವುಗಳು ಕಂಡು ಗಾಬರಿಗೊಂಡ ಸೈಫಿ ಅವರು ಕುಟುಂಬ ಸದಸ್ಯರನ್ನು, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಸುಮಾರು 100ಕ್ಕೂ ಹೆಚ್ಚು ಹಾವುಗಳು ಕೊಂದು ಹೂತು ಹಾಕಿದ್ದಾರೆ.
ಅಂದಹಾಗೆ ರಾತ್ರಿ 9 ಗಂಟೆಯ ಹೊತ್ತಿಗೆ, ಭಯಭೀತರಾದ ಗ್ರಾಮಸ್ಥರು 100 ಹಾವುಗಳನ್ನು ಆತುರದಿಂದ ಅಗೆದ ಗುಂಡಿಯಲ್ಲಿ ಕೊಂದು ಹೂಳಿದ್ದಾರೆ. “ಇದ್ದಕಿದ್ದಂತೆ ಹವುಗಳು ಜೀವಂತ ಪ್ರವಾಹದಂತೆ ಬರುತ್ತಿದ್ದವು. ನಾವು ಅರಣ್ಯ ಇಲಾಖೆಗೆ ಪದೇ ಪದೇ ಕರೆ ಮಾಡಿದೆವು, ಆದರೆ ಯಾರೂ ನಮಗೆ ಸಹಾಯ ಮಾಡಲು ಬರಲಿಲ್ಲ. ಎಂದು ಮನೆ ದುರಂತ ನಡೆದ ರೈತ ಮಹ್ಫೂಜ್ ವಿವರಿಸಿದ್ದಾರೆ.
ಅಲ್ಲದೆ ಅಧಿಕಾರಿಗಳ ಅನುಪಸ್ಥಿತಿಯಿಂದಾಗಿ ನಿದ್ರೆಯಿಂದ ವಂಚಿತರಾದ ಗ್ರಾಮಸ್ಥರು ಕೋಲುಗಳು ಮತ್ತು ಲ್ಯಾಂಟರ್ನ್‌ಗಳೊಂದಿಗೆ ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.ಏತನ್ಮಧ್ಯೆ, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅರಣ್ಯ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಆ ತಕ್ಷಣ ಗ್ರಾಮಕ್ಕೆ ಧಾವಿಸಿದ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
