Home » ಪೆರಾಬೆ : ಮೆದುಳಿನ ರಕ್ತಸ್ರಾವ ಬಾಲಕಿ ಸಾವು

ಪೆರಾಬೆ : ಮೆದುಳಿನ ರಕ್ತಸ್ರಾವ ಬಾಲಕಿ ಸಾವು

0 comments

ಕಡಬ : ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ ಬಾಲಕಿಯೊಬ್ಬಳು ಆ.26 ರಂದು ಮೃತಪಟ್ಟ ಘಟನೆ ಆಲಂಕಾರು ಸಮೀಪದ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರಿನ ಮಣಿಕ್ಕಳದ ಸೋಮನಾಥ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ(11 ವ.) ಮೃತ ಬಾಲಕಿ.

ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಶುಕ್ರವಾರ ಬೆಳಿಗ್ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ.

ಹೆತ್ತವರು ಆಸ್ಪತ್ರೆಗೆ ಕರೆದೊಯ್ಯುವ ದಾರಿ ನಡುವೆ ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

You may also like

Leave a Comment