Home » ಪೆರ್ಲ: ಮನೆಗೆ ಬೆಂಕಿಗಾಹುತಿ; ಬೆಲೆಬಾಳುವ ವಸ್ತು ನಾಶ

ಪೆರ್ಲ: ಮನೆಗೆ ಬೆಂಕಿಗಾಹುತಿ; ಬೆಲೆಬಾಳುವ ವಸ್ತು ನಾಶ

0 comments

ಪೆರ್ಲ: ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಮನೆಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಮನೆ ಸಂಪೂರ್ಣ ಸುಟ್ಟ ಘಟನೆ ಸಂಜೆ 4 ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ.

ಅವಘಡ ಸಂಭವಿಸಿರುವ ಮನೆ ರಮೇಶ್ಚಂದ್ರ ರೈ ಎನ್ನುವವರದಾಗಿದ್ದು, ಸಂಕ್ರಮಣ ಇದ್ದ ಕಾರಣ ತರವಾಡು ಸಂಬಂಧ ಕಾರ್ಯಕ್ಕಾಗಿ ಪೆರುವಾಯಿಯ ದೇವಸ್ಥಾನಕ್ಕೆ ಹೋಗಿದ್ದು, ಪತ್ನಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಘಟನೆ ಅರಿವಿಗೆ ಬರುವಾಗ ಮನೆಗೆ ಬೆಂಕಿ ಪೂರ್ತಿ ಹತ್ತಿಕೊಂಡಿದೆ.

ಮನೆಯೊಳಗೆ ಫ್ರಿಡ್ಜ್‌ನ ಕರೆಂಟ್‌ನಿಂದ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿದೆ ಎನ್ನಲಾಗಿದೆ. ಕಾಸರಗೋಡಿನಿಂದ ಅಗ್ನಿಶಾಮಕ ದಳದವರು ಬಂದು ಊರವರ ಜೊತೆ ಸೇರಿ ಬೆಂಕಿ ನಂದಿಸಿದ್ದಾರೆ. ಮನೆಯೊಳಗೆ ಇದ್ದ ಬೆಲೆಬಾಳುವ ವಸ್ತು ಸಹಿತ ಬಟ್ಟೆ ಬರೆಗಳು ಬೆಂಕಿಗಾಹುತಿಯಾಗಿದೆ.

You may also like