Home » ಪೆಟ್ರೋಲ್, ಡೀಸೆಲ್ ಅಭಾವ; ಮುಂದಿನ ವಾರದಿಂದ ಶಾಲೆಗಳು ಕ್ಲೋಸ್ !!

ಪೆಟ್ರೋಲ್, ಡೀಸೆಲ್ ಅಭಾವ; ಮುಂದಿನ ವಾರದಿಂದ ಶಾಲೆಗಳು ಕ್ಲೋಸ್ !!

1 comment

ಈಗಾಗಲೇ ಆರ್ಥಿಕ ದಿವಾಳಿಯಾಗಿದೆ ನೆರೆ ರಾಷ್ಟ್ರ ಶ್ರೀಲಂಕಾ. ಭಾರತ ಸಹಾಯಹಸ್ತ ನೀಡಿದ ಬಳಿಕವೂ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದ್ದು, ಮುಂದಿನ ವಾರದಿಂದ ಶಾಲೆಗಳನ್ನು ಬಂದ್‌ ಮಾಡುವುದಾಗಿ ಲಂಕಾ ಶಿಕ್ಷಣ ಸಚಿವಾಲಯ ಘೋಷಿಸಿದೆ.

ಶಾಲಾ- ಕಾಲೇಜುಗಳೊಂದಿಗೆ ಸಾರ್ವಜನಿಕ ವಲಯ ಕಚೇರಿಗಳನ್ನೂ ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಶ್ರೀಲಂಕಾ ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಮುಂದಿನ ವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿದೆ.

ಶ್ರೀಲಂಕಾ ತನ್ನ ಆಮದುಗಳಿಗೆ ಪಾವತಿಸಲು, ವಿದೇಶಿ ವಿನಿಮಯ ಪಡೆಯಲು ತೀವ್ರ ಒತ್ತಡದಲ್ಲಿದೆ. ಇದು ದೇಶದ ಆರ್ಥಿಕತೆಯ ಹಲವಾರು ಕ್ಷೇತ್ರಗಳಿಗೂ ಹಿನ್ನಡೆ ಉಂಟುಮಾಡುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

You may also like

Leave a Comment