Home » Philippines: ಮಹಿಳೆಯರು, ಮಕ್ಕಳಿಗೆ ಲೈಂಗಿಕ ಕಿರುಕುಳ; 2000 ಪೊಲೀಸರಿಂದ ಪಾದ್ರಿಯ ಬಂಧನ

Philippines: ಮಹಿಳೆಯರು, ಮಕ್ಕಳಿಗೆ ಲೈಂಗಿಕ ಕಿರುಕುಳ; 2000 ಪೊಲೀಸರಿಂದ ಪಾದ್ರಿಯ ಬಂಧನ

1 comment

Philippines: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಪೊಲೀಸರು ಅಪೊಲೊ ಕ್ವಿಬೊಲೊಯ್ ಅವರನ್ನು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ. ಕ್ವಿಬೋಲೋಯ್ ತನ್ನನ್ನು “ದೇವರ ಮಗ” ಎಂದು ಘೋಷಿಸಿದ್ದು, ಈತ ಜೀಸಸ್ ಕ್ರೈಸ್ಟ್ ಸಾಮ್ರಾಜ್ಯದ ಚರ್ಚ್ (KOJC) ನ ಪಾದ್ರಿ. ಎರಡು ವಾರಗಳಿಗೂ ಹೆಚ್ಚು ಕಾಲ ನಡೆದ ಭಾರೀ ಶೋಧದ ನಂತರ ಪೊಲೀಸರು ಕ್ವಿಬೊಲೊಯ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪಾದ್ರಿ ಪಿಲಿಪೀನ್ಸ್‌ ಮಾಜಿ ಅಧ್ಯಕ್ಷ ರೊಡ್ರಿಗೊ ಡುಟರ್ಟ್‌ಗೂ ಆಪ್ತನಾಗಿದ್ದು, ಈತನನ್ನು ಬಂಧನ ಮಾಡಲು 2000 ಪೊಲೀಸರನ್ನು ನಿಯೋಜನೆ ಮಾಡಿದ್ದು, ಎರಡು ವಾರಗಳ ಶೋಧ ಕಾರ್ಯ ನಡೆಸಲಾಗಿತ್ತು.

ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಪೊಲೊ ಕ್ವಿಬೊಲೊಯ್ ಅವರ ಅನುಯಾಯಿಗಳಾಗಿದ್ದರು. 74 ವರ್ಷದ ಈತನ ವಿರುದ್ಧ ಮಕ್ಕಳ ಕಳ್ಳಸಾಗಣೆ, ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆ ಆರೋಪ ಹೊಂದಿದ್ದಾನೆ.

ಅಪೊಲೊ ಕ್ವಿಬೊಲೊಯ್ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಜನಿಸಿದ್ದು, ಕ್ವಿಬೋಲೋಯ್ 1985 ರಲ್ಲಿ ಕಿಂಗ್ಡಮ್ ಆಫ್ ಜೀಸಸ್ ಕ್ರೈಸ್ಟ್ (KOJC) ಅನ್ನು ಸ್ಥಾಪಿಸಿದರು. ಇದು ಒಂದು ಸಣ್ಣ ಧಾರ್ಮಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ಬಹಳ ಬೇಗ ಪ್ರಸಿದ್ಧಿಯನ್ನು ಪಡೆದಿತ್ತು.

ಮಹಿಳೆಯರು ಮತ್ತು ಮಕ್ಕಳ ಶೋಷಣೆ
ನಂಬಿಕೆಯ ಸೋಗಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ವ್ಯವಸ್ಥಿತವಾಗಿ ನಿಂದನೆ ಮತ್ತು ಶೋಷಣೆ ಮಾಡಲಾಗಿತ್ತು.

You may also like

Leave a Comment