Dhanraj achar: ಟಿಕ್ ಟಾಕ್ ಸ್ಟಾರ್,ರಿಲ್ಸ್ ರಾಣಿ, ವಿವಾದಿತ ಬೆಡಗಿ ಸೋನು ಗೌಡ(Sonu gouda) ಅವರು ಇತ್ತೀಚಿಗೆ ಮಾಲ್ಡೀವ್ಸ್(Maldives) ಗೆ ಹೋಗಿ ಬಿಕನಿ ತೊಟ್ಟು ಹಲವಾರು ರೀತಿಯ ವಿವಿಧ ಭಂಗಿಗಳ ಹಾಟ್ ಫೋಟೋಗಳನ್ನು ತೆಗೆಸಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ಮೂಲಕ ಸಾಕಷ್ಟು ಟ್ರೋಲ್(Troll) ಗೆ ಒಳಗಾಗಿ ರಾಜ್ಯದ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ಧಿಯಾಗಿದ್ರು. ಆದರೀಗ ಈ ಬೆನ್ನಲ್ಲೇ ಗಿಚ್ಚಗಿಲಿಗಿಲಿ ಖ್ಯಾತಿಯ ಕರಾವಳಿ ಹುಡುಗ, ಧನರಾಜ್ ಆಚಾರ್(Dhanaraj achar) ಅವರು ದಂಪತಿ ಸಮೇತರಾಗಿ ಮಾಲ್ಡೀವ್ಸ್ ಗೆ ತೆರಳಿದ್ದು ಸೋನು ಗೌಡ ಅವರಿಗೆ ಬಟ್ಟೆ ಸುತ್ತಿ ಮೆಟ್ಟಲ್ಲಿ ಹೊಡೆದಿದ್ದಾರೆ ಎನ್ನುವ ಮಾತೊಂದು ವೈರಲ್ ಆಗುತ್ತಿದೆ.
ಹೌದು, ಇತ್ತೀಚೆಗೆ ಹೆಚ್ಚಿನೋರು ಮಾಲ್ಡೀವ್ಸ್ ಪ್ರವಾಸ ಹೋಗುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರಿಗೂ ಇದು ಫೇವರಿಟ್ ಪ್ಲೇಸ್ ಆಗ್ಬಿಟ್ಟಿದೆ. ಇನ್ನು ಹೆಚ್ಚಿನವರು ಮಾಲ್ಡೀವ್ಸ್‌ಗೆ ಹೋದರೆ ಬಿಕಿನಿ ಡ್ರೆಸ್‌ನಲ್ಲಿ ಅಥವಾ ಚಡ್ಡಿಯ ಮೇಲೆ ಪೋಸ್ ಕೊಟ್ಟು ಹಾಟ್ ಆಗಿ ಕಾಣಿಸಿಕೊಳ್ತಾರೆ. ಅಂತೆಯೇ ನಮ್ಮ ಕರ್ನಾಟಕದ ಸೋನು ಗೌಡ ಟಾಕ್ ಆಫ್ ದಿ ವೀಕ್, ಮಂತ್ ಎಲ್ಲಾ ಆಗಿದ್ದನ್ನು ನಾವು ನೋಡಿದ್ದೇವೆ. ಸದ್ಯ ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 ಖ್ಯಾತಿಯ ಧನ್‌ರಾಜ್ ಆಚಾರ್ ಮಾಲ್ಡೀವ್ಸ್‌ನಲ್ಲಿ ಮಜಾಮಾಡುತ್ತಿದ್ದಾರೆ. ಆದರೆ ಧನರಾಜ್ ಮಾತ್ರ ಎಲ್ಲರಿಗೂ ಫೇವರಿಟ್ ಆಗ್ಬಿಟ್ಟಿದ್ದಾರೆ. ಮಾಲ್ಡೀವ್ಸ್ ನಲ್ಲಿ ಧನ್‌ರಾಜ್ ನಡೆಯನ್ನು ನೋಡಿದ ನೆಟ್ಟಿಗರು ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ತಿಕೊಂಡು ಹೊಡೆದಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.
ಯಾಕೆಂದರೆ ಕೆಲವೊಂದು ವಿವಾದಗಳಿಂದ ಕರ್ನಾಟಕದಲ್ಲಿ ಈಗಾಗಲೇ ಫೇಮಸ್ ಆಗಿರೋ, ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಮಾಲ್ಡೀವ್ಸ್‌ಗೆ ಹೋಗಿ ತಾನು ಯಾವ ಹೀರೋಯಿನ್‌ಗೂ ಕಡಿಮೆಯಿಲ್ಲವೆಂಬಂತೆ ಬಿಕಿನಿ ತೊಟ್ಟು ಹಾಟ್ ಪೋಸ್ ನೀಡಿದ್ದಾರೆ. ಇನ್ನು ಗಿಚ್ಚಿ ಗಿಲಿಗಿಲಿ ಸೀಸನ್-2 ಖ್ಯಾತಿಯ ಧನ್‌ರಾಜ್ ಹಾಗೂ ಅವರ ಪತ್ನಿ ಪ್ರಜ್ಞಾ ಧನ್‌ರಾಜ್ ಮಾಲ್ಡೀವ್ಸ್‌ಗೆ ಹೋಗಿದ್ದು ದಂಪತಿ ಸಮೇತವಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಇದರಲ್ಲಿ ಭಾರತೀಯ ಸಂಪ್ರದಾಯದಂತೆ ಧನರಾಜ್ ಪಂಚೆ ಶರ್ಟ್ ಹಾಕಿ ಫೋಸ್ ನೀಡಿದ್ರೆ, ಅವರ ಶ್ರೀಮತಿ ಸೀರೆ ಉಟ್ಟು ನಗೆ ಬೀರಿದ್ದಾರೆ.
ಸದ್ಯ ಸೋನುಗೌಡ ಮತ್ತು ಧನ್‌ರಾಜ್ ದಂಪತಿಯ ಫೋಟೋಗಳನ್ನು ಹೋಲಿಕೆ ಮಾಡಿದ ನೆಟ್ಟಿಗರು, ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ತಿಕೊಂಡು ಹೊಡೆದಿದ್ದೀರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸೋನುಗೆ ರೇಷ್ಮೆ ಬಟ್ಟೆಗೆ ಚಪ್ಲಿ ಸುತ್ಗೊಂಡ್ ಹೊಡೆದ ಹಾಗೆ ಮಾಡಿದಿರಾ ಸೂಪರ್ ಎಂದು ಗಿಚ್ಚಿ ಗಿಲಿಗಿಲಿ ಧನರಾಜ್ ಆಚಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
