Home » Karkala: ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ಗ್ಯಾಂಗ್‌ ರೇಪ್‌; ಪ್ರಮುಖ ಆರೋಪಿಗೆ ಜಾಮೀನು

Karkala: ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ಗ್ಯಾಂಗ್‌ ರೇಪ್‌; ಪ್ರಮುಖ ಆರೋಪಿಗೆ ಜಾಮೀನು

0 comments

Karkala: ಯುವತಿಯೋರ್ವಳ ಮೇಲೆ ಗ್ಯಾಂಗ್‌ ರೇಪ್‌ ನಡೆದಿರುವ ಪ್ರಕರಣಕ್ಕೆ ಕುರಿತಂತೆ ಇದೀಗ ಪ್ರಮುಖ ಆರೋಪಿಗೆ ಜಾಮೀನು ಮಂಜೂರಾಗಿದೆ.

ಪ್ರಮುಖ ಆರೋಪಿ ಅಲ್ತಾಫ್‌ಗೆ ಜಾಮೀನು ನೀಡಲಾಗಿದೆ. ಉಡುಪಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಯುವತಿಗೆ ಅಮಲು ಪದಾರ್ಥ ನೀಡಿ ಗ್ಯಾಂಗ್‌ ರೇಪ್‌ ನಡೆಸಿರುವ ಘಟನೆಯೊಂದು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆ.21 ರಂದು ನಡೆದಿತ್ತು. ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ಆರೋಪಿಗಳು ನಂತರ ಪರಾರಿಯಾಗಿದ್ದರು.

ಅಯ್ಯಪ್ಪನಗರದ ಬಳಿಯ ಹಾಡಿಯಲ್ಲಿ ಕುಕ್ಕಂದೂರು ಗ್ರಾಮದ 21ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಅಲ್ತಾಫ್‌ ಸೇರಿ ಮೂವರಿಗೆ ಬಂಧನ ಮಾಡಲಾಗಿತ್ತು.

You may also like

Leave a Comment