Home » ಹಂದಿ ಸಾಕಾಣಿಕೆಯ ಗೂಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು | 150 ಹಂದಿಗಳು ಸಜೀವ ದಹನ !!

ಹಂದಿ ಸಾಕಾಣಿಕೆಯ ಗೂಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು | 150 ಹಂದಿಗಳು ಸಜೀವ ದಹನ !!

0 comments

ಹಂದಿ ಸಾಕಾಣಿಕೆಯ ಗೂಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ 150 ಹಂದಿಗಳು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಹೊರವಲಯದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಪಾಂಡವಪುರದ ಮಹಾತ್ಮಗಾಂಧಿ ನಗರ ಬಡಾವಣೆಯ ಶಿವರಾಜು ಎಂಬವರಿಗೆ ಸೇರಿದ ಹಂದಿ ಗೂಡು ಇದಾಗಿದೆ ಎಂದು ತಿಳಿದುಬಂದಿದೆ.

ಶಿವರಾಜು ಅವರು ಹೊರವಲಯದಲ್ಲಿ ಗೂಡು ನಿರ್ಮಿಸಿಕೊಂಡು ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಗೂಡಿನ ಸಮೀಪ ಯಾರು ಇಲ್ಲದಿದ್ದನ್ನು ಗಮನಿಸಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಶಿವರಾಜು ಅವರು ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ದುಷ್ಕರ್ಮಿಗಳ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment