Home » ಕಣಜದ ಹುಳು (ಪಿಲಿ ಕುಡೋಲು) ದಾಳಿ | ಮೆಕ್ಯಾನಿಕ್ ಸಾವು

ಕಣಜದ ಹುಳು (ಪಿಲಿ ಕುಡೋಲು) ದಾಳಿ | ಮೆಕ್ಯಾನಿಕ್ ಸಾವು

by Praveen Chennavara
0 comments

ಮಂಗಳೂರು : ಎಡಪದವು ಪಟ್ಲಚ್ಚಿಲ್‌ನ ನಿವಾಸಿ
ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್‌ನಲ್ಲಿ
ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ
(24) ಎಂಬವರು ಕಣಜದ ಹುಳುಗಳ (ಪಿಲಿಕುಡೋಲು)
ದಾಳಿಯಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.

ಮನೆಯ ತೆಂಗಿನ ಮರಗಳ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿ ತಂದಿದ್ದ ಯಂತ್ರ ಬಳಸಿಕೊಂಡು ಮರ ಏರಿದ ಸಂದರ್ಭದಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಕಣಜ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದೆ. ಈ ವೇಳೆ ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿದ್ದು,ಪರಿಣಾಮ ಅವರ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿತ್ತು.

ಕೂಡಲೇ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಫಲಿಸದೆ ಕೇಶವ ಕೊನೆಯುಸಿರೆಳೆದರು.

ಅವಿವಾಹಿತರಾಗಿದ್ದ ಅವರು ಮೂವರು ಸಹೋದರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬುಧವಾರ ಅಂತ್ಯಸಂಸ್ಕಾರ ನಡೆಸಲಾಯಿತು.

You may also like

Leave a Comment