8
Bangalore: ರಾಜ್ಯದಲ್ಲಿ ಮಹಿಳೆಯರಿಗಾಗಿ ʼಪಿಂಕ್ʼ ಬೈಕ್‌ಗಳನ್ನು ಬಿಡುಗಡೆ ಮಾಡಲು ರ್ಯಾಪಿಡೋ ಮುಂದಾಗಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಆಗಿರುವ ರ್ಯಾಪಿಡೋ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಮುಂದಿನ ಕಾರ್ಯಯೋಜನೆ ಪ್ರಕಟ ಮಾಡಿದೆ. ರ್ಯಾಪಿಡೋ ಬೈಕ್‌ಗಳಲಿ ಮಹಿಳಾ ಕ್ಯಾಪ್ಟನ್‌ಗಳು ಪರಿಚಯಿಸಲಿದ್ದು, ಈ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುವುದು ನಮ್ಮ ಗುರಿ ಎಂದು ಕಂಪನಿಯ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದ್ದಾರೆ. ಪಿಂಕ್ ಬೈಕ್ ಮೂಲಕ 25,000 ಮಹಿಳಾ ಚಾಲಕರಿಗೆ ಉದ್ಯೋಗ ನೀಡುವುದಾಗಿ ಕಂಪನಿ ಹೇಳಿದೆ. ಮಹಿಳೆ ಅಪರಿಚಿತ ಚಾಲಕನೊಂದಿಗೆ ಸುರಕ್ಷಿತವಾಗಿ ಪ್ರಯಾಣ ಮಾಡಿ, ಸುಲಭವಾಗಿ ತಲುಪಬೇಕಾದ ಸ್ಥಳ ತಲುಪಿದರೆ ಅದು ನಮ್ಮ ಯಶಸ್ಸು ಎಂದು ಗುಂಟುಪಲ್ಲಿ ಹೇಳಿದರು.
