PM Kisan Yojana: ಕೇಂದ್ರ ಸರಕಾರ ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯ ಮಾಡಿದ್ದು, ಇದು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಪಿಎಂ ಕಿಸಾನ್ ನಿಧಿಯ 20 ನೇ ಕಂತನ್ನು ರೈತರಿಗೆ ನೀಡಲಾಗಿದ್ದು, 21 ನೇ ಕಂತು ಬಾಕಿಯಿದೆ.
ಕೃಷಿಯಲ್ಲಿ ರೈತರಿಗೆ ಸಹಾಯ ಮಾಡಲು ಸರಕಾರ ವರ್ಷಕ್ಕೆ ಮೂರು ಬಾರಿ 2000 ರೂ. ಉಚಿತ ಸಹಾಯವನ್ನು ನೀಡುತ್ತದೆ. ಇದು ವರ್ಷಕ್ಕೆ ರೂ.6000 ಗಳನ್ನು ಬಿಡುಗಡೆ ಮಾಡುತ್ತದೆ.
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಂಡಿರುವ ಆದರೆ ಇಕೆವೈಸಿ ಮಾಡದ ರೈತರಿಗೆ ಹಣ ಸಿಗುವುದಿಲ್ಲ. ಈ ಯೋಜನೆಯ ಲಾಭ ಪಡೆಯುತ್ತಿರುವವರು ಕೆವೈಸಿ ಮಾಡದಿದ್ದರೆ ಕೇಂದ್ರವು ಈ ಕಂತನ್ನು ನಿಲ್ಲಿಸುತ್ತದೆ. ಕೆವೈಸಿ ವಿವರಗಳನ್ನು ಒದಗಿಸುವಂತೆ ಕೇಂದ್ರವು ಪದೇ ಪದೇ ಸೂಚಿಸಿದರೂ ಕೆವೈಸಿ ಮಾಡದ ಅನೇಕರು ಇದ್ದಾರೆ. ಇವರಿಗೆ ಮುಂದಿನ ಕಂತು ಸಿಗುವುದಿಲ್ಲ ಎಂದು ಹೇಳಲಾಗಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಆಧಾರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಹಣ ಸಿಗುವುದಿಲ್ಲ. ಆಧಾರ್ ಮೂಲಕ ಇಕೆವೈಸಿ ಜೊತೆಗೆ ಭೂ ದಾಖಲೆಗಳನ್ನು ಮತ್ತೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ ಕಿಸಾನ್ ಹಣ ದೊರಕುವುದಿಲ್ಲ.
