PM Modi : 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜಯವನ್ನು ಆಚರಿಸುವ ಸಲುವಾಗಿ, ನವೆಂಬರ್ 5 ರಂದು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿ ಅಭಿನಂದಿಸಿದರು. ವೇಳೆ ಪ್ರಧಾನಿ ಮೋದಿಯವರಿಗೆ ಹರ್ಲಿನ್ ಕೌರ್ ಅವರು ನಿಮ್ಮ ಚರ್ಮದ ತ್ವಚೆಯ ರಹಸ್ಯವೇನು? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಪ್ರಧಾನಿ ಕೊಟ್ಟ ಉತ್ತರವೇನಿತ್ತು ಗೊತ್ತೇ?
ಹೌದು, ಕ್ರಿಕೆಟ್ ವನಿತೆಯ ರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ ಆಟಗಾರ್ತಿಯರು ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಕೌರ್ ಡಿಯೋಲ್ ಅವರು ಪ್ರಧಾನಿಗೆ ಹಾಸ್ಯವಾಗಿ ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ, ಅದರ ರಹಸ್ಯವೇನು, ನಿಮ್ಮ ಸ್ಕಿನ್ ಕೇರ್ ದಿನಚರಿ ಏನು ಎಂದು ಕೇಳಿದ್ದಾರೆ.
ಇದಕ್ಕೆ ಪ್ರಧಾನಿಯವರು ನಾನು ಈ ವಿಚಾರದ ಬಗ್ಗೆ ಅಷ್ಟೊಂದು ಯೋಚನೆಯೇ ಮಾಡಿಲ್ಲ ಎಂದು ಹೇಳಿದ್ದಾರೆ. ಕ್ರಿಕೆಟರ್‌ಗಳ ಜೊತೆಗಿನ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಸಂವಾದವನ್ನು ಸ್ವತಃ ಪ್ರಧಾನಿಯವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಈ ಪ್ರಶ್ನೆಗೆ ಉತ್ತರ ನೀಡದೇ ಇದ್ದರೂ ಟೀಂನಲ್ಲಿದ್ದ ಆಲ್‌ರೌಂಡರ್ ಸ್ನೇಹಾ ರಾಣಾ ಹರ್ಲಿನ್ ಪ್ರಶ್ನೆಗೆ ಉತ್ತರಿಸಿ ಹೀಗೆ ಹೇಳಿದ್ದಾರೆ. ದೇಶವಾಸಿಗಳ ಪ್ರೀತಿಯೇ ಪ್ರಧಾನಿಯನ್ನು ಹೊಳೆಯುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಖಂಡಿತ ಹೌದು. ಇದು ನನ್ನ ಶಕ್ತಿಯ ದೊಡ್ಡ ಮೂಲವಾಗಿದೆ. ನಾನು ಸರ್ಕಾರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಚರ್ಮದ ಆರೈಕೆ ಬಗ್ಗೆ ಹೆಚ್ಚು ಯೋಚನೆ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದರು.
