Home » P.M.Modi: ಸ್ಕೂಬಾ ಡ್ರೈವ್ ಮಾಡಿ ಸಮುದ್ರದಳದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ನಮಿಸಿದ “ನಮೋ”

P.M.Modi: ಸ್ಕೂಬಾ ಡ್ರೈವ್ ಮಾಡಿ ಸಮುದ್ರದಳದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ನಮಿಸಿದ “ನಮೋ”

0 comments

P.M.Modi: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೆರಡು ದಿನಗಳಿಂದ ಗುಜರಾತ್ ಪ್ರವಾಸದಲ್ಲಿದ್ದು ಇದೇ ವೇಳೆ
ದ್ವಾರಕಾಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ನೌಕಾಪಡೆಯ ಸಿಬ್ಬಂದಿಯೊಂದಿಗೆ ಸ್ಕೂಬಾ ಡೈವ್‌ಗೆ ತೆರಳಿದರು.

ಗೋಮತಿ ಘಾಟ್‌ನಲ್ಲಿರುವ ಸುದಾಮಾ ಸೇತುವೆಯನ್ನು ದಾಟಿದ ನಂತರ ಅವರು ಪಂಚಕುಯಿ ಬೀಚ್ ಪ್ರದೇಶವನ್ನು ತಲುಪಿದರು. ಅಲ್ಲಿಂದ ಸುಮಾರು 2 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಐ ಸ್ಕೂಬಾ ಡ್ರೈವ್ ದೃಶ್ಯಗಳನ್ನು ಹಂಚಿಕೊಂಡಿರುವ ಮೋದಿ
“ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಬಹಳ ದೈವಿಕ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಕಾಲಾತೀತ ಭಕ್ತಿಯ ಪ್ರಾಚೀನ ಯುಗದೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂಬಂತೆ ಬಾಸವಾಯಿತು. ಭಗವಾನ್ ಶ್ರೀ ಕೃಷ್ಣನು ನಮ್ಮೆಲ್ಲರನ್ನೂ ಆಶೀರ್ವದಿಸಲಿ “ಎಂದು ಬರೆದುಕೊಂಡಿದ್ದಾರೆ.

You may also like

Leave a Comment