Home » ಸಂಕ್ರಾಂತಿಗೆ ಪಿಎಂ ಕಚೇರಿ ಶಿಫ್ಟ್

ಸಂಕ್ರಾಂತಿಗೆ ಪಿಎಂ ಕಚೇರಿ ಶಿಫ್ಟ್

0 comments

ಹೊಸದಿಲ್ಲಿ: ಸ್ವತಂತ್ರ ಭಾರತ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಕಚೇರಿಯ ವಿಳಾಸ ಬದಲಾಗಲಿದ್ದು, ಮಕರ ಸಂಕ್ರಾಂತಿಯಂದು ಕಾರ್ಯಾಲಯ ಸ್ಥಳಾಂತರಕ್ಕೆ ಮುಹೂರ್ತ ನಿಗದಿಯಾಗಿದೆ. ಪ್ರಸ್ತುತ ದಿಲ್ಲಿಯ ‘ಸೌತ್ ಬ್ಲಾಕ್’ನಲ್ಲಿರುವ ಪ್ರಧಾನಿ ಕಾರ್ಯಾಲಯವು ‘ಸೆಂಟ್ರಲ್ ವಿಸ್ತಾ’ದ ಭಾಗವಾಗಿ ನಿರ್ಮಿಸಲಾಗಿರುವ ‘ಸೇವಾ ತೀರ್ಥ-1’ ಸಂಕೀರ್ಣಕ್ಕೆ ಸ್ಥಳಾಂತರ ಗೊಳ್ಳಲಿದೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಸೇವೆ ಸಲ್ಲಿಸಿದ ಅದೇ ಕಚೇರಿಯಲ್ಲೇ ನಂತರದ ಎಲ್ಲಾ ಪ್ರಧಾನಿ ಗಳು ಕಾರ್ಯನಿರ್ವಹಿಸಿದ್ದರು.

ಪ್ರಧಾನಿ ಕಾರ್ಯಾಲಯದ ಜತೆಗೆ ಸಂಪುಟ ಕಾರ್ಯದರ್ಶಿಗಳ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಕಚೇರಿಗೂ ‘ಸೆಂಟ್ರಲ್ ವಿಸ್ತಾ’ ಹೊಸ ವಿಳಾಸವಾಗಲಿದೆ

 

You may also like