Home » LPG ಸಿಲಿಂಡರ್ ರೀಫಿಲ್ ಮಾಡಲು ‘ಬಡ್ಡಿ ರಹಿತ ಸಾಲ’ ಲಭ್ಯ

LPG ಸಿಲಿಂಡರ್ ರೀಫಿಲ್ ಮಾಡಲು ‘ಬಡ್ಡಿ ರಹಿತ ಸಾಲ’ ಲಭ್ಯ

by Mallika
0 comments

ದೇಶದ ಬಡ ಜನರಿಗೆ ಸರಕಾರ ಆರ್ಥಿಕ ಸಹಾಯದಿಂದ ಹಿಡಿದು ಉಚಿತ ಪಡಿತರವನ್ನು ಸರ್ಕಾರದ ನೀಡುತ್ತಿದೆ. ಹಾಗೆನೇ ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದೆ.

ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕದ್ದಲು ಇತ್ಯಾದಿಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಿದ ಪರಿಣಾಮ ಈ ಯೋಜನೆ ಪ್ರಾರಂಭಿಸಲಾಯ್ತು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಡೆಸುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್ಪಿಜಿ ಸಂಪರ್ಕ, ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗುತ್ತದೆ, ಈ ಯೋಜನೆಯಡಿಯಲ್ಲಿ ಪ್ರತಿ ಸಂಪರ್ಕವು ಗ್ಯಾಸ್ ಸ್ಟವ್ ಖರೀದಿಸಲು ಮತ್ತು ಸಿಲಿಂಡರ್ ರೀಫಿಲ್ ಮಾಡಲು ಬಡ್ಡಿ ರಹಿತ ಸಾಲವನ್ನು ಪಡೆಯಲು ಅರ್ಹವಾಗಿರುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರವು ಅನೇಕ ಅರ್ಹತೆಗಳನ್ನು ಹೊಂದಿಸಿರುವಾಗ ಅರ್ಹತೆಯನ್ನು ಪೂರೈಸಬೇಕಾಗುತ್ತದೆ. ಈ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಈ ಆರ್ಹತೆ ಹೊಂದಲು ಈ ಮಾನದಂಡಗಳನ್ನು ಪೂರೈಸಿಬೇಕು.

  • ಭಾರತೀಯ ಪ್ರಜೆಯಾಗಿರಬೇಕು.
  • 18 ವರ್ಷ ಮೇಲ್ಪಟ್ಟವರಾಗಿರಬೇಕು.
  • LPG ಸಂಪರ್ಕವನ್ನ ಹೊಂದಿರದ, BPL ಕುಟುಂಬದ
  • ಮಹಿಳೆಯಾಗಿರಬೇಕು.
  • ಇದೇ ರೀತಿಯ ಇತರ ಯೋಜನೆಗಳ ಅಡಿಯಲ್ಲಿ
    ಯಾವುದೇ ಪ್ರಯೋಜನವನ್ನು ಪಡೆದಿರಬಾರದು.

ಎಸ್‌ಇಸಿಸಿ 2011 ಅಥವಾ ಎಸ್ಸಿ/ಎಸ್ಟಿ ಕುಟುಂಬಗಳ ಅಡಿಯಲ್ಲಿ ಬಿಪಿಎಲ್ ಕುಟುಂಬಗಳ ಪಟ್ಟಿಯಲ್ಲಿರುವ ಫಲಾನುಭವಿಗಳು, ಪಿಎಂಎವೈ (ಗ್ರಾಮೀಣ), ಎಎವೈ, ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ), ಅರಣ್ಯವಾಸಿಗಳು, ನದಿ ದ್ವೀಪಗಳಲ್ಲಿ ವಾಸಿಸುವ ಜನರು ಅಥವಾ ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟು ಜನಾಂಗದವರು ಆಗಿರಬೇಕು.

You may also like

Leave a Comment