Police Arrest: ಕಳ್ಳರನ್ನು, ದರೋಡೆಕೋರರನ್ನು, ಕೊಲೆಗಾರರನ್ನು ಪೊಲೀಸರು ಹಿಡಿಯೋದು ಕೇಳಿದ್ದೇವೆ. ಆದರೆ ಇಲ್ಲಿ ಪೊಲೀಸರೇ ಪೊಲೀಸಪ್ಪನನ್ನು ಒದ್ದು ಒಳಗೆ ಹಾಕಿದ ಘಟನೆ ನಡೆದಿದೆ. ಬೆಂಗಳೂರಿನ ಪೀಣ್ಯಾ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ, ಹಿರಿಯೂರು ಪೊಲೀಸ್ ಠಾಣೆ ಹೆಡ್ಚಕಾನ್ಸ್ಟೇಬಲ್ ನಾಗರಾಜ್ ಹಾಗೂ ಆತನ ಗ್ಯಾಂಗ್ ನ ಕಿರಣ್ ಅಲಿಯಾಸ್ ರಂಜಿತ್, ಗಜೇಂದ್ರ, ಪ್ರಭು ಬಂಧಿತ ಆರೋಪಿಗಳು.
Mangalore: ಬಂಟ್ವಾಳ ರಹಿಮಾನ್ ಹತ್ಯೆ ಪ್ರಕರಣ: ಮುಸ್ಲಿಂ ಮುಖಂಡರ ಸಭೆಯಲ್ಲಿ ಅಲ್ಲೋಲಕಲ್ಲೋಲ: ವಿಡಿಯೋ ವೈರಲ್
ಬ್ಯಾಂಕ್ ರಿಜೆಕ್ಟೆಡ್ ನೋಟ್ ಇದೆ ಎಂದು ನಂಬಿಸಿ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದರು. ಒಂದು ಕೋಟಿಗೂ ಅಧಿಕ ನೋಟ್ ಇದೆ ಎಂದು ಹೇಳಿ ನಂಬಿಸುತ್ತಿದ್ರು. ಬಳಿಕ ಚಿತ್ರದುರ್ಗದಿಂದ ಹಣ ನೀಡಲು ಬರುತ್ತಿರುವ ಹಾಗೆ ಹೇಳ್ತಿದ್ರು. ಒಂದು ಸ್ಥಳದಲ್ಲಿ ಪೊಲೀಸರ ತಮ್ಮನ್ನು ಹಿಡಿದಿದ್ದಾರೆ ಬನ್ನಿ ಎಂದು ಕರೆಸಿಕೊಳ್ತಿದ್ರು. ಪೊಲೀಸರಿಗೆ ನಮ್ಮ ಹಣದ ವ್ಯವಹಾರ ಗೊತ್ತಾಗಿಲ್ಲಾ , ಇನ್ನು ಕೆಲವು ಬಾರಿ ಗೊತ್ತಿದೆ. ಆದ್ರೆ ನಾವು ಅದನ್ನು ಡೀಲ್ ಮಾಡಬಹುದು ಎಂದು ಹೇಳುತಿದ್ರು.
HC:ವಾಟ್ಸಪ್ ಚಾಟ್‌ಗಳು ಇನ್ನು ಸಾಕ್ಷಿಗಳಾಗುವುದಿಲ್ಲ – ಹೈಕೋರ್ಟ್ ಮಹತ್ವದ ತೀರ್ಪು
ಅಮಾಯಕರನ್ನು ನಂಬಿಸಿ ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ಪೊಲೀಸರ ನಮ್ಮನ್ನು ಬಿಡಲು ಹತ್ತು ಲಕ್ಷ ಕೇಳಿದ್ದಾರೆ ಎಂದು ಹೇಳಿ ಹಣ ಪಡೆಯುತಿದ್ರು. ಗಜೇಂದ್ರ, ಕಿರಣ್, ಪ್ರಭು ಈ ಡ್ರಾಮಾ ಮಾಡ್ತಿದ್ರು. ಈ ವೇಳೆ ಪೊಲೀಸ್ ತಾನೇ ಇವರನ್ನು ವಶಕ್ಕೆ ಪಡೆದಿರುವಂತೆ ನಾಗರಾಜ್ ನಟಿಸುತಿದ್ದ. ನಂತ್ರ ಹಣ ಡೀಲ್ ಮಾಡಲು ಬರ್ತಿದ್ದವನ ಬಳಿಕ ಕೇಸ್ ಮಾಡದೇ ಎಲ್ಲರನ್ನು ಬಿಟ್ಟು ಕಳಿಸಲು ಹಣ ಪಡೆಯುತಿದ್ದ.
Kamal Haasan: ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ – ನಟ ಕಮಲ್ ಹಾಸನ್ ವಿರುದ್ಧ ಪ್ರಕರಣ ದಾಖಲು
ಇದೇ ರೀತಿ ಹಲವರ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಪೀಣ್ಯ ಪೊಲೀಸ್ ಠಾಣೆಗೆ ಒರ್ವ ವ್ಯಕ್ತಿ ದೂರು ನೀಡಿದ್ದ ಅನ್ವಯ ಕೇಸ್ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು. ಅಲ್ಲದೆ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಅರೆಸ್ಟ್ ಆಗಿದ್ದು, ಆರೋಪಿಗಳ ಹೆಚ್ಚಿನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
