Vijayapura: ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ, ಪ್ರತಿಭಟನೆಯನ್ನು ತಡೆಯಲು ಬಂದ ಪಿಎಸ್ಐಗೆ ಸಂಗನಬಸವೇಶ್ವರ ಸ್ವಾಮೀಜಿ ಕಪಾಳ ಮುಖ್ಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧವಾಗಿ ನಡೆಯುತ್ತಿದ್ದ ಹೋರಾಟದ (Protest) ವೇಳೆ ವಿಜಯಪುರದಲ್ಲಿ (Vijayapura) ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದಾರೆ. ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಕಿತ್ತುಗೊಂಡಿದ್ದಕ್ಕೆ ಸಿಟ್ಟಿಗೆದ್ದ ಸ್ವಾಮೀಜಿ, ಪಿಎಸ್‌ಐ ಸೀತಾರಾಮ ಲಮಾಣಿ ಮೇಲೆ ಕೈ ಮಾಡಿದ್ದಾರೆ. ಸಂಗನ ಬಸವೇಶ್ವರ ಸ್ವಾಮೀಜಿ, ಬಸವನಬಾಗೇವಾಡಿ ತಾಲೂಕಿನ ಪಿ ಬಿ ಹುಣಶ್ಯಾಳ ಗ್ರಾಮದ ಮಠದ ಸ್ವಾಮೀಜಿ ಆಗಿದ್ದಾರೆ. ಬಳಿಕ ಸ್ವಾಮೀಜಿಯನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
