Home » ಉಡುಪಿಯಲ್ಲಿ ಗ್ರಾಹಕರಿಗೆ ಕಾಯುತ್ತಿದ್ದ ಲೈಂಗಿಕ ಕಾರ್ಯಕರ್ತೆಯರಿಗೆ ಪೊಲೀಸರ ಕ್ಲಾಸ್!! ಖಡಕ್ ವಾರ್ನಿಂಕ್-ಲಾಡ್ಜ್ ಗಳಿಗೂ ಎಚ್ಚರಿಕೆ!!

ಉಡುಪಿಯಲ್ಲಿ ಗ್ರಾಹಕರಿಗೆ ಕಾಯುತ್ತಿದ್ದ ಲೈಂಗಿಕ ಕಾರ್ಯಕರ್ತೆಯರಿಗೆ ಪೊಲೀಸರ ಕ್ಲಾಸ್!! ಖಡಕ್ ವಾರ್ನಿಂಕ್-ಲಾಡ್ಜ್ ಗಳಿಗೂ ಎಚ್ಚರಿಕೆ!!

0 comments

ಉಡುಪಿ: ನಗರದ ರಸ್ತೆಗಳಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ಲೈಂಗಿಕ ಕಾರ್ಯಕರ್ತೆಯರಿಗೆ ನಗರ ಪೊಲೀಸರು ಕ್ಲಾಸ್ ನೀಡಿದ್ದು,ಜನಸಾಮಾನ್ಯರಿಗೆ ತೊಂದರೆ ಉಂಟುಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಹಲವು ಬಾರಿ ಎಚ್ಚರಿಕೆ ನೀಡಿದ್ದು, ಆದರೂ ತಲೆಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ನಗರ ಪೊಲೀಸರು ಹಲವು ಕಡೆಗಳಿಗೆ ತೆರಳಿ ಎಚ್ಚರಿಕೆ ನೀಡಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸಿದಲ್ಲಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

ಅಲ್ಲದೇ ನಗರದಲ್ಲಿರುವ ಕೆಲವೊಂದು ಲಾಡ್ಜ್ ಗಳೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಲೈಂಗಿಕ ಕಾರ್ಯಕರ್ತೆಯರ ಸಹಿತ ಗ್ರಾಹಕರಿಗೆ ಕಡಿಮೆ ದರದಲ್ಲಿ ರೂಮ್ ಬಾಡಿಗೆ ಕೊಟ್ಟು ಕಮಿಷನ್ ಪಡೆದುಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಲಾಡ್ಜ್ ಗಳಿಗೂ ಎಚ್ಚರಿಕೆ ನೀಡಲಾಗಿದೆ.ಸದ್ಯ ಉಡುಪಿ ಪೊಲೀಸರು ಈ ವಿಚಾರದ ಬೆನ್ನು ಹತ್ತಿದ್ದು,ಹಲವು ಪ್ರಕರಣಗಳು ದಾಖಲಾಗುವುದರಲ್ಲಿ ಅನುಮಾನವಿಲ್ಲ.

You may also like

Leave a Comment