Kerala JDS: ಜೆಡಿಎಸ್‍ಗೆ ದೊಡ್ಡ ಶಾಕ್ ಎದುರಾಗಿದ್ದು, ಬಿಜೆಪಿ ಜೊತೆಗಿನ ಮೈತ್ರಿ ತಿರಸ್ಕರಿಸಿ, ಕೇರಳ ಘಟಕ (Kerala JDS)ಸ್ವತಂತ್ರ ಅಸ್ತಿತ್ವ ಕಾಯ್ದುಕೊಳ್ಳುವುದಾಗಿ ಘೋಷಿಸಿದೆ. ಹೀಗಾಗಿ, ಜೆಡಿಎಸ್ ಮುಖಂಡರಾದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (Former PM HD Deve Gowda) ನೇತೃತ್ವದ ಜಾತ್ಯತೀತ ಜನತಾ ದಳ(JDS) ಭಾರತೀಯ ಜನತಾ ಪಾರ್ಟಿ(BJP) ನೇತೃತ್ವದ ಎನ್‌ಡಿಎ (NDA) ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜೆಡಿಎಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ (CM Ibrahim) ಬಿಜೆಪಿ ಜೊತೆ ಮೈತ್ರಿ ಖಂಡಿಸಿದ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ನಡುವೆ, ಕೇರಳ ಜೆಡಿಎಸ್ (Kerala JDS) ಕೂಡ ಬಂಡಾಯ ಬಾವುಟ ಬೀಸಿದ್ದು, ಕೇರಳ ಜೆಡಿಎಸ್ Kerala JDS ಬಿಜೆಪಿ ಜತೆಗಿನ ಮೈತ್ರಿಯನ್ನು ವಿರೋಧಿಸಿದ್ದು, ಸ್ವತಂತ್ರ ಅಸ್ತಿತ್ವ ಕಾಯ್ದುಕೊಳ್ಳುವುದಾಗಿ ಹೇಳಿಕೊಂಡಿದೆ.
ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಮತ್ತು ವಿದ್ಯುತ್ ಸಚಿವ ಕೆ ಕೃಷ್ಣಮೂರ್ತಿ ಅವರು ಕರ್ನಾಟಕದ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ, ಬಿಜೆಪಿ ಜತೆಗಿನ ಪಕ್ಷದ ಮೈತ್ರಿಯು ಸ್ವೀಕಾರ್ಹವಲ್ಲ. ನೀವು ಕೈಗೊಂಡಿರುವ ನಿರ್ಧಾರವು ಸರಿಯಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ನಾವು ಈ ಸಂಬಂಧಕ್ಕೆ ಅಂತ್ಯ ಹಾಡುತ್ತಿದ್ದು,ಕೇರಳದಲ್ಲಿ ಸಮಿತಿ ಸಭೆ ನಡೆಸಿ ಸ್ವತಂತ್ರವಾಗಿ ನಿಲ್ಲಲು ತೀರ್ಮಾನ ಮಾಡಿರುವುದನ್ನು ಕೇರಳ ವಿದ್ಯುತ್ ಸಚಿವ ಕೆ ಕೃಷ್ಣಮೂರ್ತಿ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಇಂದು ಈ ರಾಶಿಯ ಮಕ್ಕಳಿಗೆ ಶೈಕ್ಷಣಿಕ ವಿಷಯದಲ್ಲಿ ಬೃಹತ್ ಲಾಭ
