Home » Yathindra Siddaramaiah : ಬಿಜೆಪಿಯಿಂದ ಹೊಸ ಪೋಸ್ಟರ್ ರಿಲೀಸ್ – ಅಪ್ಪಾಜಿ, ಅಪ್ಪಾಜಿ ಎಂದು ಕಾಲೆಳೆದಿದ್ಯಾರಿಗೆ ?!

Yathindra Siddaramaiah : ಬಿಜೆಪಿಯಿಂದ ಹೊಸ ಪೋಸ್ಟರ್ ರಿಲೀಸ್ – ಅಪ್ಪಾಜಿ, ಅಪ್ಪಾಜಿ ಎಂದು ಕಾಲೆಳೆದಿದ್ಯಾರಿಗೆ ?!

0 comments
Yathindra Siddaramaiah

Yathindra Siddaramaiah : ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (‌Yathindra Siddaramaiah) ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಇಂಬು ನೀಡುವಂತೆ ಲಭ್ಯವಾಗಿರುವ ವಿಡಿಯೊ ಇಟ್ಟುಕೊಂಡು ಬಿಜೆಪಿ ಈಗ ಪೋಸ್ಟರ್‌ ಅಭಿಯಾನವನ್ನು ಆರಂಭಿಸಿದೆ.

Yathindra Siddaramaiah

ಎರಡು ದಿನಗಳ ಹಿಂದಷ್ಟೇ “ಹೆಲೋ ಅಪ್ಪ..!” ಎಂಬ ಅಡಿ ಶೀರ್ಷಿಕೆ ಅಡಿ ಶ್ಯಾಡೋ ಸಿಎಂ ಪೋಸ್ಟರ್‌ ಮಾಡಿರುವ ಬಿಜೆಪಿ ಈಗ ಪಾರ್ಲೆ ಜಿ ಬಿಸ್ಕೆಟ್‌ ಮಾದರಿಯಲ್ಲಿ “ಅಪ್ಪಾ ಜಿ” ಎಂಬ ಪೋಸ್ಟರ್‌ ಒಂದನ್ನು ತಯಾರಿಸಿ ಸಿಎಂ ಸಿದ್ದರಾಮಯ್ಯರನ್ನೊಳ ಗೊಂಡಂತೆ ಕಾಂಗ್ರೆಸ್‌ ಸರ್ಕಾರದ ಕಾಲೆಳೆದಿದೆ. ಬಿಜೆಪಿ ತನ್ನ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, “ಅಪ್ಪಾ ಜಿ” ಎಂಬ ಪೋಸ್ಟರ್‌ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಹಂಗಿಸಿದೆ.

ಇದರಲ್ಲಿ “ಒಬ್ಬರು ಕಲೆಕ್ಷನ್‌ ಮಾಸ್ಟರ್ ಆಗಿದ್ದು, ಇನ್ನೊಬ್ಬರು ಡೀಲ್‌ ಮಾಸ್ಟರ್ ಎನ್ನಲಾಗಿದೆ. ಇದೇ #‌ATMSarkara ದ ಮ್ಯಾಟರ್!” ಎಂದು ಕೂಡ ಬರೆದುಕೊಂಡಿದ್ದು, ಇದರ ಜೊತೆಗೆ #ShadowCM, #CongressFailsKarnataka ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹಾಕಲಾಗಿದೆ. ಈ ಹಿಂದೆ ಕೂಡ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ( BJP releases shadow CM poster on Yathindra Siddaramaiah)ಅವರ ಕಾಲೆಳೆದಿತ್ತು. ಈಗ ಅಪ್ಪಾ ಜಿ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ನ ಕಾಲೆಳೆಯುವ ಪ್ರಯತ್ನ ಮಾಡಿದೆ.

 

ಇದನ್ನು ಓದಿ: Miss Universe 2023: ಭುವನ ಸುಂದರಿ ಸ್ಪರ್ಧೆ; ನೇಪಾಳಿ ಸ್ಪರ್ಧಿಯ ಅಂದ-ಚೆಂದಕ್ಕೆ ಮೈಮರೆತ ಜನ !!

You may also like

Leave a Comment