Home » MP Pratap Simha: ಪ್ರತಾಪ್‌ ಸಿಂಹ ಸಿದ್ದರಾಮಯ್ಯರಿಗೆ ಏನೆಂದು ಹೇಳಿದ್ರು? ಏಕವಚನದಲ್ಲಿ ಅಂದ ಮಾತ್ಯಾವುದು? ದಾಖಲಾಯ್ತು ಪ್ರತಾಪ್‌ ಸಿಂಹ ವಿರುದ್ಧ FIR!!!

MP Pratap Simha: ಪ್ರತಾಪ್‌ ಸಿಂಹ ಸಿದ್ದರಾಮಯ್ಯರಿಗೆ ಏನೆಂದು ಹೇಳಿದ್ರು? ಏಕವಚನದಲ್ಲಿ ಅಂದ ಮಾತ್ಯಾವುದು? ದಾಖಲಾಯ್ತು ಪ್ರತಾಪ್‌ ಸಿಂಹ ವಿರುದ್ಧ FIR!!!

1 comment
MP Pratap Simha

Pratap Simha: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ(MP Pratap Simha) ಸಿದ್ಧರಾಮಯ್ಯ(Siddaramaiah) ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮಾರಿ ಸಿದ್ದ ಎಂದು ಏಕವಚನದಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ(FIR)ದಾಖಲಾಗಿದೆ.

ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ ಮುಖ್ಯಮಂತ್ರಿ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಅವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ದೂರು ನೀಡಿದ್ದು, ಕೋಮು ಪ್ರಚೋದನಾ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಇದರ ಅನುಸಾರ ಪೊಲೀಸರು ಭಾರತೀಯ ದಂಡ ಸಂಹಿತೆ 504(ಉದ್ದೇಶಪೂರ್ವಕವಾಗಿ ನಿಂದಿಸಿ ಶಾಂತಿಭಂಗ ಉಂಟುಮಾಡುವುದು), 153(ಕೋಮುಗಳ ನಡುವೆ ದ್ವೇಷ ಹುಟ್ಟಿಸುವುದು) ಸೆಕ್ಷನ್ ಗಳ ಅನ್ವಯ ಎಫ್ಐಆರ್ ದಾಖಲಾಗಿದೆ.

ಇದನ್ನು ಓದಿ: Gas Geyser Precautions: ಅಪಾಯಕಾರಿ ಆಗುತ್ತಿದೆ ಗ್ಯಾಸ್ ಗೀಸರ್ !! ಯಾವ ದುರಂತ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ ?!

You may also like

Leave a Comment