Home » Pejavara shri: ಪ್ರಧಾನಿ ಮೋದಿ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇಲ್ಲ….!! ಪೇಜಾವರ ಶ್ರೀಗಳಿಂದ ಅಚ್ಚರಿ ಹೇಳಿಕೆ

Pejavara shri: ಪ್ರಧಾನಿ ಮೋದಿ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇಲ್ಲ….!! ಪೇಜಾವರ ಶ್ರೀಗಳಿಂದ ಅಚ್ಚರಿ ಹೇಳಿಕೆ

0 comments
Pejavara shri

Pejavara shri: ‘ಪ್ರಧಾನಿ ಮೋದಿ ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಂತೋಷವಿದೆ, ಆದರೆ ತೃಪ್ತಿ ಇಲ್ಲ’ ಎಂದು ಉಡುಪಿಯ ಪೇಜಾವರ ಮಠದ ಶ್ರೀಗಳು ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದಾರೆ.

 

ಹೌದು, ಖಾಸಗಿ ವಾಹಿನಿಯೊಂದರಲ್ಲಿ ಪ್ರತೀ ವಾರಾಂತ್ಯ ವಿಶೇಷ ಅತಿಥಿಗಳನ್ನು ಕರೆಸಿ ಸದ್ಯದ ವಿಚಾರಗಳ ಕುರಿತು ಚರ್ಚೆಗಳನ್ನು ನಡೆಸುವುದು ವಾಡಿಕೆ. ಅಲ್ಲದೆ ಈ ಕಾರ್ಯಕ್ರಮ ತುಂಬಾ ಪ್ರಸಿದ್ಧಿಯನ್ನೂ ಗಳಿಸಿದೆ. ಅಂತೆಯೇ ಈ ವಾರಾಂತ್ಯದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಗಳು ಆಗಮಿಸಿದ್ದು ರಾಮ ಮಂದಿರ ಉದ್ಘಾಟನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಪ್ರೋಮೋ, ವಿಡಿಯೋ ತುಣುಕುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನು ಓದಿ: Melbourne : ಸ್ಟೇಡಿಯಂ ನಲ್ಲೇ ಕಪಲ್ ಗಳ ಕುಚು-ಕುಚು !! ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಏನು ಮಾಡಿದ್ರು ಗೊತ್ತಾ?! ವೈರಲ್ ಆಯ್ತು ವಿಡಿಯೋ

ಅಂದಹಾಗೆ ಚರ್ಚೆಯಲ್ಲಿ ಪಾಲ್ಗೊಂಡ ಒಬ್ಬರು ಆಡಿಯನ್ಸ್ ಶ್ರೀಗಳಿಗೆ ‘ರಾಮ ಮಂದಿರ ಉದ್ಘಾಟನೆ ಕಾರ್ಯ ನಡೆಯುತ್ತಿದ್ದು, ಮೋಲಿಜಿಯವರಿಗೆ ಆಹ್ವಾನ ನೀಡಿದ್ದೀರಿ. ಹೀಗಾಗಿ ಮೋದಿಯವರ ಆಡಳಿತ, ಕಾರ್ಯ-ವೈಖರಿ ಬಗೆಗೆ ನೀವು ಏನು ಹೇಳುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಆದಕ್ಕೆ ಶ್ರೀಗಳು ಇದುವರೆಗಿನ ಕಾರ್ಯಗಳ ಬಗೆಗೆ ಸಂತೋಷ ಇದೆ, ಆದರೆ ತೃಪ್ತಿ ಇಲ್ಲ. ಏಕೆಂದರೆ ಅವರು ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟು ಇವೆ’ ಎಂದು ಹೇಳಿದ್ದಾರೆ.

You may also like

Leave a Comment