Nitin Gadkari: ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಭಾರೀ ಚರ್ಚೆಯಲ್ಲಿದ್ದಾರೆ. ಗಡ್ಕರಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರಲಿ ಅಥವಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿರಲು ಅವರ ಶೈಲಿ ಭಿನ್ನವಾಗಿರುತ್ತದೆ. ಈಗ ಅವರು ಹೇಳಿದಂತಹ ಒಂದು ಹೇಳಿಕೆ ನಿಜಕ್ಕೂ ಚರ್ಚೆಯ ವಿಷಯವಾಗಿ ಉಳಿದಿದೆ. ಒಮ್ಮೆ ನಾಯಕರೊಬ್ಬರು ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾಗಿ ಅವರು ಹೇಳಿದ್ದಾರೆ. ಆ ನಾಯಕನ ಹೆಸರನ್ನು ಗಡ್ಕರಿ ಬಹಿರಂಗಪಡಿಸಿದ್ದಾರೆ ಕೂಡಾ.
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಬಿಜೆಪಿ ಸರಕಾರದ ಒಂಭತ್ತು ವರ್ಷ ಪೂರೈಸಿದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರು ಮೊದಲಿಗೆ ನನ್ನನ್ನು ಹೊಗಳಿದರು. ಇದಾದ ನಂತರ ನೀವು ಕಾಂಗ್ರೆಸ್ ಸೇರಬೇಕು ಎಂಬ ಮಾತನ್ನು ಹೇಳಿದರು. ನೀನು ತುಂಬಾ ಶ್ರಮಜೀವಿ, ನಿನ್ನ ಭವಿಷ್ಯ ತುಂಬಾ ಚೆನ್ನಾಗಿರುತ್ತೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ಕಾಂಗ್ರೆಸ್‌ನ ಸದಸ್ಯನಾಗುವುದಕ್ಕಿಂತ ಬಾವಿಗೆ ಹಾರುವುದೇ ಒಳ್ಳೆಯದು ಎಂದು ಹೇಳಿದರೆಂದು ಈ ಸಂದರ್ಭದಲ್ಲಿ ಹೇಳಿದರು.
ಹಾಗೆನೇ ಈ ಸಂದರ್ಭದಲ್ಲಿ ಅವರು “60 ವರ್ಷಗಳ ಕಾಂಗ್ರೆಸ್ ಸರ್ಕಾರ ಮತ್ತು 9 ವರ್ಷಗಳ ಬಿಜೆಪಿ ಸರ್ಕಾರವನ್ನು ಹೋಲಿಕೆ ಮಾಡಿದರೆ ಬಿಜೆಪಿ ದುಪ್ಪಟ್ಟು ಕೆಲಸ ಮಾಡಿದೆ” ಎಂದು ಹೇಳಿದರು. ಗಡ್ಕರಿ ಅವರು ಮಹಾರಾಷ್ಟ್ರದ ಭಂಡಾರಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ದಿವಂಗತ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜಿಚ್ಕರ್ ಎಂಬುವವರೇ ಒಮ್ಮೆ ಕಾಂಗ್ರೆಸ್ ಪಕ್ಷ ಸೇರುವಂತೆ ಸಲಹೆ ನೀಡಿದ್ದರು ಎಂಬುವುದಾಗಿ ಹಳೆಯ ವಿಷಯವನ್ನು ನೆನಪಿಸಿಕೊಂಡ ಗಡ್ಕರಿ, ಕಾಂಗ್ರೆಸ್ ನಾಯಕ ಜಿಚ್ಕರ್ ಅವರು ನೀವು ಬಿಜೆಪಿ ಪಕ್ಷದ ಒಳ್ಳೆಯ ಕಾರ್ಯಕರ್ತ ಮತ್ತು ನಾಯಕ ಎಂದು ಹೇಳಿದ್ದಾರೆ. ಆದರೆ ಗಡ್ಕರಿ ಅವರಿಗೆ ವ್ಯತಿರಿಕ್ತ ಉತ್ತರ ನೀಡಿದರು. ಕಾಂಗ್ರೆಸ್ ಸೇರುವುದಕ್ಕಿಂತ ಬಾವಿಗೆ ಹಾರುವುದೇ ಲೇಸು ಎಂಬ ಉತ್ತರವನ್ನು ನೀಡಿದ್ದಾರೆ. ಆರ್‌ಎಸ್‌ಎಸ್ ಮತ್ತು ಅದರ ವಿದ್ಯಾರ್ಥಿ ಘಟಕ ಎಬಿವಿಪಿಯನ್ನು ಗಡ್ಕರಿ ಹೊಗಳಿದ್ದಾರೆ.
ಇದನ್ನು ಓದಿ: Benglore: ಉಚಿತ ಬಸ್ ಪ್ರಯಾಣ ಎಫೆಕ್ಟ್ : ಫ್ರೀ, ಫ್ರೀ ಎಂದು ಇಡೀ ಒಂದು ಬಸ್ಸನ್ನೇ ಬುಕ್ ಮಾಡಲು ಬಂದ ಅಜ್ಜಿ!!
