Home » Congress government: ‘ಗ್ಯಾರಂಟಿ’ ಗಳ ಜಾರಿ ಬೆನ್ನಲ್ಲೇ ರಾಜ್ಯ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಹೊಸ ಭಾಗ್ಯದ ಜಾರಿಗೆ ನಿರ್ಧಾರ

Congress government: ‘ಗ್ಯಾರಂಟಿ’ ಗಳ ಜಾರಿ ಬೆನ್ನಲ್ಲೇ ರಾಜ್ಯ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಹೊಸ ಭಾಗ್ಯದ ಜಾರಿಗೆ ನಿರ್ಧಾರ

1 comment
Congress government

Congress Government: ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳಲ್ಲಿ (Guarantee Scheme) ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದು ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಇದೀಗ ಕಾಂಗ್ರೆಸ್ ಸರ್ಕಾರ (Congress government) ಜನರ ಏಳಿಗೆಗಾಗಿ ಮತ್ತೊಂದು ಯೋಜನೆ ಜಾರಿಗೆ ತರಲು ತಯಾರಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿ ಆರೋಗ್ಯ ಸಮಸ್ಯೆಗಳಾದ ಡಯಾಬಿಟಿಸ್, ಹೈಪರ್ ಟೆನ್ಶನ್ ಬಿಪಿ ಮುಂತಾದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಜನರು ನಿರ್ಲಕ್ಷ್ಯ ಮಾಡುತ್ತಾರೆ. ಇದಕ್ಕಾಗಿ ಈ ಹೊಸ ಯೋಜನೆ ರೂಪಿಸಲಾಗುತ್ತಿದೆ.

ಹೌದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗೃಹ ಆರೋಗ್ಯ ಯೋಜನೆ ಜಾರಿ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಈ ಹೊಸ ಯೋಜನೆಗೆ ಗೃಹ ಆರೋಗ್ಯ (Gruha Arogya) ಎಂದು ಹೆಸರು ಇಡಲಾಗಿದ್ದು, ಸದ್ಯ ಕ್ಯಾಬಿನೆಟ್ ಒಪ್ಪಿಗೆಗಾಗಿ ಮನವಿ ಸಲ್ಲಿಸಲಾಗಿದೆ.
ಜೊತೆಗೆ ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಈ ಸೇವೆ ಆರಂಭ ಮಾಡಲು ಚಿಂತನೆ ಮಾಡಲಾಗಿದೆ.

ಗೃಹ ಆರೋಗ್ಯ ಯೋಜನೆ ಜಾರಿಯಾದ್ರೆ ಆರೋಗ್ಯ ನಿರ್ಲಕ್ಷ ಮಾಡುವವರನ್ನು ಸುಲಭವಾಗಿ ಪತ್ತೆ ಮಾಡಬಹುದು. ಅದಕ್ಕಾಗಿ ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿ ಆರೋಗ್ಯ ತಪಾಸಣೆ ಮಾಡುವ ಯೋಜನೆ ಇದಾಗಿದೆ. ಈ ಹಿಂದೆ ಪ್ರತಿ 5 ಸಾವಿರ ಜನರಿಗೆ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ಇನ್ನು ಮುಂದೆ ಅದೇ ಆರೋಗ್ಯ ಕ್ಷೇಮ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಅಧಿಕಾರಿ ಆಶಾ ಕಾರ್ಯಕರ್ತೆಯರ ಜೊತೆ ಮನೆ ಮನೆ ಭೇಟಿ ಮಾಡುತ್ತಾರೆ.

ಈ ಮನೆ ಭೇಟಿ ವೇಳೆ ಬಿಪಿ ಶುಗರ್ ಜ್ವರ, ಕ್ಯಾನ್ಸರ್ ಪರಿಶೀಲನೆ ನಡೆಯುತ್ತದೆ. ಈ ಕಾಯಿಲೆಗಳು ಇರುವುದು ಪತ್ತೆ ಆದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ಶಿಫಾರಸ್ಸು ಮಾಡಲಾಗುತ್ತದೆ.’ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಪ್ರತೀ ತಿಂಗಳು ರವಾನೆ ಮಾಡುವ ಕೆಲಸ ಈ ಯೋಜನೆಯಡಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಅಣ್ಣನಿಗೆ ರಾಖಿ ಕಟ್ಟಿ 21 ಸಾವಿರ ಡಿಮ್ಯಾಂಡ್ ಮಾಡಿದ ಸೋದರಿಯರು- ಹಣವಿಲ್ಲ ಅಂದಿದ್ದಕ್ಕೆ ಅತ್ತಿಗೆಗೆ ಮಾಡಿದ್ದೇನು ಗೊತ್ತೇ ?

You may also like

Leave a Comment