Home » ಥಟ್ ಅಂತ ಹೇಳಿ ! ರಾಜಕೀಯದ ರಸಪ್ರಶ್ನೆ ಇಟ್ಟ ಬಿಜೆಪಿ | ಮುಸ್ಲಿಂ ಬಾಂಧವರಿಗೆ ಮೀಸಲಿಟ್ಟ ಭೂಮಿಯನ್ನು ನುಂಗಿ ಹಾಕಿದವರು ಯಾರು ?

ಥಟ್ ಅಂತ ಹೇಳಿ ! ರಾಜಕೀಯದ ರಸಪ್ರಶ್ನೆ ಇಟ್ಟ ಬಿಜೆಪಿ | ಮುಸ್ಲಿಂ ಬಾಂಧವರಿಗೆ ಮೀಸಲಿಟ್ಟ ಭೂಮಿಯನ್ನು ನುಂಗಿ ಹಾಕಿದವರು ಯಾರು ?

0 comments

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ ತೀವ್ರವಾಗಿದ್ದು ಮತ್ತಷ್ಟು ರಂಗೇರಿದೆ. ಈಗ ರಾಜಕೀಯದ ರಸಪ್ರಶ್ನೆ ಸ್ಪರ್ಧೆ ತಂದಿದೆ ರಾಜ್ಯ ಬಿಜೆಪಿ ನಾ ಸೋಮೇಶ್ವರ ಅವರ ‘ ಥಟ್ ಅಂತ ಹೇಳಿ ‘ ಎಂಬ ಜನಪ್ರಿಯ ಟಿವಿ ಶೋ ಹೆಸರಿನಲ್ಲಿ ಈ ರಾಜಕೀಯ ಕ್ವಿಜ್ ಶುರುವಾಗಿದೆ.

ವಕ್ಫ್ ಮಂಡಳಿಗೆ ಸೇರಿದ ಅಂದಾಜು 2.30 ಲಕ್ಷ ಕೋಟಿ ರೂಪಾಯಿ ಮೌಲ್ಯದ 29,000 ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣದ ಭೂಗಳ್ಳ ಯಾರು? ಎಂದು ಟ್ವಿಟ್ಟರ್ ನಲ್ಲಿ  ಪ್ರಶ್ನಿಸಿದೆ. ಆಯ್ಕೆಯಲ್ಲಿ 4 ಹೆಸರುಗಳನ್ನು ಮತ್ತು ಫೋಟೋಗಳನ್ನು ಪ್ರಕಟಿಸಿದೆ ಬಿಜೆಪಿ. ಅವರಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಜಮೀರ್ ಅಹಮ್ಮದ್ ಅವರು ಸೇರಿದ್ದಾರೆ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಪದವಿ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಲ್ಯಾಪ್‌ಟಾಪ್‌ ವಿತರಣೆಯಲ್ಲೂ ಗೋಲ್‌ ಮಾಡಿ ಬರೋಬ್ಬರಿ 300 ಕೋಟಿ ರೂ. ಲಪಟಾಯಿಸಿದವರು ಯಾರು? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ನಮ್ಮ ‘ಕಾಮನ್‌ ಮ್ಯಾನ್‌ ಸಿಎಂ’ ಅವರನ್ನು ನಾಯಿಗೆ ಹೋಲಿಸುವ ಸಿದ್ದರಾಮಯ್ಯನವರು ಸೋನಿಯಾ, ರಾಹುಲ್‌ ಎದುರು ಬಂದರೆ ಇಲಿಯಂತಾಗುತ್ತಾರೆ, ಬೊಮ್ಮಾಯಿ ಅವರನ್ನು ಬಾಯಿಗೆ ಬಂದಂತೆ ಆಡಿಕೊಂಡವರದ್ದು ಈಗ ನಾಯಿಪಾಡು ಆಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

You may also like

Leave a Comment