Home » Hit and Run: ಪೊನ್ನಂಪೇಟೆ ರಸ್ತೆಯ ಹಿಟ್ ಅಂಡ್ ರನ್ ಕೇಸ್ – ಶಂಕಾಸ್ಪದ ಆರೋಪಿ ಪತ್ತೆ – ಪೊಲೀಸರಿಂದ ತನಿಖೆ  

Hit and Run: ಪೊನ್ನಂಪೇಟೆ ರಸ್ತೆಯ ಹಿಟ್ ಅಂಡ್ ರನ್ ಕೇಸ್ – ಶಂಕಾಸ್ಪದ ಆರೋಪಿ ಪತ್ತೆ – ಪೊಲೀಸರಿಂದ ತನಿಖೆ  

0 comments

Hit and Run: ಗೋಣಿಕೊಪ್ಪ, ಪೊನ್ನಂಪೇಟೆ ರಸ್ತೆಯ, ಅರುವತೋಕ್ಲು ಸರ್ವದೇವತಾ ಶಾಲೆಯ ಸಮೀಪ ಬಿ.ವಿ ಶಶಿಧರ್ ಎಂಬುವರು ಮನೆಯ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿರುವ ಸಂದರ್ಭ ವಾಹನವೊಂದು ಡಿಕ್ಕಿ ಹೊಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಅದೇ ಗ್ರಾಮದ ಕೆ. ವಸಂತ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಪೊಲೀಸರು ಇದೀಗ ಸಿಸಿಟಿವಿಗಳನ್ನು ಪರಿಶೀಲಿಸುವ ಮೂಲಕ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ.

ಡಿಕ್ಕಿ ಪಡಿಸಿ ಗಾಯಳುವನ್ನು ಆಸ್ಪತ್ರೆಗೂ ಕೂಡ ದಾಖಲಿಸದೆ ಆರೋಪಿ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಬಸಕ್ಕೆ ತಲೆಯ ಭಾಗಕ್ಕೆ ಪೆಟ್ಟಾಗಿದ್ದು ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೀವನ ಮರಣ ಹೋರಾಟದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

You may also like