8
Suhas shetty: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಂಭ್ರಮಿಸಿದ್ದಲ್ಲದೇ, ಫೀನೀಶ್ – ಮುಂದಿನ ಟಾರ್ಗೆಟ್ ಯಾರು ಎಂದೆಲ್ಲಾ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದ 12 ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇನ್ಸಾಗ್ರಾಂ, ಫೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದ ಸಂದೇಶಗಳನ್ನಾಧರಿಸಿ ನಗರದ ಬೇರೆ ಬೇರೆ ಠಾಣೆಗಳಲ್ಲಿ ಈ ದೂರುಗಳು ದಾಖಲಾಗಿತ್ತು. ಜೊತೆಗೆ ಹಲವು ಮಂದಿ ಸುಹಾಸ್ ಶೆಟ್ಟಿ ಸಾವಿಗೆ ಖಂಡನೆ ವ್ಯಕ್ತಪಡಿಸಿ ಪ್ರತೀಕಾರಕ್ಕೆ ಕರೆ ನೀಡಿದ್ದರು. ರಕ್ತಕ್ಕೆ ರಕ್ತವೇ ಬೇಕು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅವರ ವಿರುದ್ಧವೂ ಸಹ ದೂರು ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಶಾಂತಿಗೆ ಭಂಗ, ಕೋಮುಗಳ ನಡುವೆ ದ್ವೇಷ, ಕೋಮುವಾದಕ್ಕೆ ಪ್ರಚೋದನೆ ಇತ್ಯಾದಿ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
