Home » Udupi: ಹೂತಿದ್ದ ನಾಯಿ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ!

Udupi: ಹೂತಿದ್ದ ನಾಯಿ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ!

0 comments

Udupi: ಸಾವಿನ ಕುರಿತು ಸಂಶಯ ಬಂದ ಸಂದರ್ಭದಲ್ಲಿ ಮನುಷ್ಯನ ಹೂತ ಶವ ಹೊರತೆಗೆದು ಪರೀಕ್ಷೆ ನಡೆಸುವುದನ್ನು ನೀವು ನೋಡಿರಬಹುದು, ಕೇಳಿರಬಹುದು. ಆದರೆ ಇಲ್ಲಿನ ಕಾಪು ತಾಲೂಕಿನ ಮಣಿಪುರ ಎಂಬಲ್ಲಿ ಸತ್ತ ನಾಯಿ ಶವ ಮೇಲೆತ್ತಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ ಅಪರೂಪದ ಘಟನೆ ಸೋಮವಾರ ನಡೆದಿದೆ.

ಬಡಗುಮನೆ ಸಾಮಾಜಿಕ ಕಾರ್ಯಕರ್ತೆ ಬಿಂದು ಶೆಟ್ಟಿ ಅವರು ದೇಶಿ ತಳಿ ನಾಯಿ ಸಾಕಿದ್ದರು. ಆದರೆ ಫೆ.21 ರಂದು ಆ ನಾಯಿ ಮೃತಪಟ್ಟಿತ್ತು. ನೆರೆಮನೆ ವ್ಯಕ್ತಿ ವಿಷ ಉಣಿಸಿ ಕೊಂದಿದ್ದಾರೆ ಎಂದು ಬಿಂದು ಅವರು ಕಾಪು ಠಾಣೆಗೆ ದೂರನ್ನು ನೀಡಿದ್ದರು.

ಈ ಪ್ರಕರಣದ ತನಿಖೆಗಾಗಿ ಪೊಲೀಸರ ಸಮ್ಮುಖದಲ್ಲಿ ಶನಿವಾರ, ದೂರುದಾರರ ಮನೆ ಆವರಣದಲ್ಲಿ ಹೂತಿದ್ದ ನಾಯಿಯ ಶವವನ್ನು ಮೇಲೆತ್ತಲಾಯಿತು. ಅನಂತರ ಪ್ರಾಣಿ ದಯಾ ಸಂಘದ ಮಂಜುಳಾ, ಪೊಲೀಸ್‌ ಸಿಬ್ಬಂದಿ ಅರುಣ್‌ ಉಪ್ಪೂರು, ಸುಧಾಕರ್‌ನಾಯ್ಕ್‌ ಸಮ್ಮುಖದಲ್ಲಿ ಕಾನೂನು ಪ್ರಕ್ರಿಯೆ ಮಾಡಲಾಯಿತು.

ಬೈಲೂರಿನ ಪಶು ಚಿಕಿತ್ಸಾ ಕೇಂದ್ರದಲ್ಲಿ ವಿಷದ ಕುರಿತು ಮರಣೋತ್ತರ ಪರೀಕ್ಷೆ ನಡೆಸಿ, ಹೆಚ್ಚಿನ ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

You may also like