Home » Post Offices Scheme : ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಹಣ ದುಪ್ಪಟ್ಟು ಖಂಡಿತ!

Post Offices Scheme : ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಹಣ ದುಪ್ಪಟ್ಟು ಖಂಡಿತ!

7 comments

ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕಿಮ್‌ಗಳಿವೆ. ಅಂಚೆ ಕಚೇರಿಯ ಯೋಜನಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು.

ಹೌದು ಕಿಸಾನ್ ವಿಕಾಸ್ ಪತ್ರ ಮೂಲಕ ಹೂಡಿಕೆ ಮಾಡಿದ ಹಣ ದುಪ್ಪಟ್ಟಾಗುತ್ತದೆ. ಪೋಸ್ಟ್ ಆಫೀಸ್‌ನ ಈ ಸ್ಕಿಮ್‌ನಲ್ಲಿ ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ 10 ಲಕ್ಷ ರೂಪಾಯಿ ಸಿಗುತ್ತವೆ.

ನಿಮ್ಮ ಮೊತ್ತವು 123 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂಚೆ ಕಚೇರಿಗೆ ವಿಸಿಟ್ ಮಾಡಿ, ಈ ಯೋಜನೆಯ ಖಾತೆ ತೆರೆಯಬಹುದು. ಇದರಲ್ಲಿ ಜಂಟಿ ಖಾತೆಯನ್ನು ಹೊಂದಲು ಸಹ ಅವಕಾಶವಿದೆ. ಪ್ರಸ್ತುತ ಹೂಡಿಕೆದಾರರು ಈ ಯೋಜನೆಯಲ್ಲಿ ಶೇ.6.9ರಷ್ಟು ಬಡ್ಡಿ ಪಡೆಯುತ್ತಿದ್ದಾರೆ. ಯೋಜನೆಯಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ಕೂಡ ಹೂಡಿಕೆ ಮಾಡಲು ಅವಕಾಶವಿದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.

123 ತಿಂಗಳವರೆಗೆ 5 ಲಕ್ಷವನ್ನು ಹೂಡಿಕೆ ಮಾಡಿದರೆ, ಶೇ.6.9 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಅಂದರೆ ಮೆಕ್ಯೂರಿಟಿಯ ಮೇಲಿನ ಅಸಲು ಮೊತ್ತದ ಜೊತೆಗೆ ಬಡ್ಡಿಯ ಲಾಭವನ್ನೂ ಪಡೆಯಬಹುದು. ಕೇಂದ್ರ ಸರ್ಕಾರದ ಪರವಾಗಿ ಈ ಯೋಜನೆಯಲ್ಲಿ ಬಡ್ಡಿಯ ಲಾಭವನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ. ಹೂಡಿಕೆಯ ಸಮಯದಲ್ಲಿ ಬಡ್ಡಿದರಗಳಲ್ಲಿ ಬದಲಾವಣೆಯಾಗಿದ್ದರೆ, ನೀವು ಕಡಿಮೆ ಅಥವಾ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಪ್ರಸ್ತುತ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡುವ ಯೋಜನೆ ಇದ್ದಲ್ಲಿ ಕಿಸಾನ್ ವಿಕಾಸ್ ಪತ್ರ ಮೂಲಕ ಹೂಡಿಕೆ ಮಾಡಿ ದುಪ್ಪಟ್ಟು ಹಣವನ್ನು ಪಡೆಯಬಹುದಾಗಿದೆ.

You may also like

Leave a Comment