2
UP: ಯುವಕನೊಬ್ಬನ ಡಯಾಲಿಸಿಸ್ ಚಿಕಿತ್ಸೆ ವೇಳೆ ಕರೆಂಟ್ ಕಡಿತವಾಗಿದ್ದು ಈ ಸಂದರ್ಭ ಚಿಕಿತ್ಸೆಗೊಳಗಾದ ಯುವಕನೂ ಕೂಡ ಸಾವಿಗೀಡಾಗಿದ್ದಾನೆ.
ಹೌದು, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯಲ್ಲಿ ಸರ್ಫರಾಜ್ ಅಹ್ಮದ್(26) ಎಂಬ ಯುವಕ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.
ವಿದ್ಯುತ್ ಕಡಿತವಾದಾಗ ಡಯಾಲಿಸಿಸ್ ಯಂತ್ರವು ಅರ್ಧದಲ್ಲೆ ನಿಂತಿದೆ. ಇದರಿಂದ ನನ್ನ ಮಗನ ಅರ್ಧದಷ್ಟು ರಕ್ತ ಯಂತ್ರದೊಳಗೆ ಸಿಲುಕಿತು. ಆ ಸಂದರ್ಭದಲ್ಲಿ ಜನರೇಟರ್ ಆರಂಭಿಸಲು ಕೇಳಿಕೊಂಡರೂ ಯಾರೂ ಸಹಾಯ ಮಾಡಲಿಲ್ಲ. ಇದರಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಮೃತ ಸರ್ಫರಾಜ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
