Home » ಫ್ಲೈಟ್‌ನಲ್ಲಿ ಪವರ್‌ಬ್ಯಾಂಕ್ ಬ್ಯಾನ್

ಫ್ಲೈಟ್‌ನಲ್ಲಿ ಪವರ್‌ಬ್ಯಾಂಕ್ ಬ್ಯಾನ್

0 comments
Flight Ticket Price Increase

ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಪವರ್‌ಬ್ಯಾಂಕ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹ್ಯಾಂಡ್ ಬ್ಯಾಗ್‌ಗಳಲ್ಲೂ ಪವರ್‌ಬ್ಯಾಂಕ್ ಅಥವಾ ಹೆಚ್ಚುವರಿ ಬ್ಯಾಟರಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಭಾನುವಾರ ಸ್ಪಷ್ಟಪಡಿಸಿದೆ.

ಪವರ್‌ ಬ್ಯಾಂಕ್‌ಗಳಲ್ಲಿರುವ ಲೀಥಿಯಂ ಬ್ಯಾಟರಿಗಳಿಂದ ಅಗ್ನಿ ಅವಘಡಗಳು ಸಂಭವಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಿಜಿಸಿಎ, ವಿಮಾನದಲ್ಲಿ ಪವರ್‌ಬ್ಯಾಂಕ್ ಬಳಕೆ ಮತ್ತು ಅವುಗಳ ಚಾರ್ಜಿಂಗ್‌ಗೆ ಆಸ್ಪದ ನೀಡದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.

ಪವರ್‌ಬ್ಯಾಂಕ್‌ಗಳನ್ನು ವಿಮಾನದೊಳಗೆ ಕೊಂಡೊಯ್ಯದಂತೆ ತಪಾಸಣೆ ತೀವ್ರಗೊಳಿಸುವಂತೆ ಸೂಚಿಸಿದ್ದು, ವಿಮಾನದಲ್ಲಿ ಈ ಸಂಬಂಧ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ಪಾಲಿಸಬೇಕಾದ ಕ್ರಮಗಳನ್ನು ವಿವರಿಸಿದೆ.

You may also like