Pradhan Mantri Matru Vandana Yojana: ಹೆರಿಗೆಯಾದ ಮಹಿಳೆಗೆ ಸರಕಾರ 5000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಕೇಂದ್ರ ಸರ್ಕಾರ ನೀಡುವ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ಬನ್ನಿ ನೋಡೋಣ
2010 ರಲ್ಲಿ, ‘ಇಂದಿರಾ ಗಾಂಧಿ ಮಾತೃತ್ವ ಸಹಾಯ್ ಯೋಜನೆ’ ಎಂಬ ಹೆಸರಿನಲ್ಲಿ ಹೆರಿಗೆಯಾದ ಮಹಿಳೆಯರಿಗೆ ಕರಪತ್ರಗಳನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಆದರೆ 2017 ರಲ್ಲಿ ಇದನ್ನು ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ (PMMVY) ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಯಡಿ ಗರ್ಭಿಣಿಯರು ಹೆರಿಗೆಯ ನಂತರ -ರೂ.5000 ಸಾವಿರ ಲಾಭ ಪಡೆಯಬಹುದು. ಈ ಯೋಜನೆಯಲ್ಲಿ ನೆರವು ಬಯಸುವ ಮಹಿಳೆಯರು ಅಂಗನ ವಾಡಿ ಕೇಂದ್ರ ಅಥವಾ ಉಮಂಗ್ ಆಪ್ ಅಥವಾ ಉಮಂಗ್ -ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಯೋಜನೆಗೆ ಸೇರ್ಪಡೆಗೊಂಡರೆ ರೂ.5 ಸಾವಿರ :
ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಯಡಿ ಮಹಿಳೆಯರಿಗೆ ರೂ. 5 ಸಾವಿರ ನೀಡುತ್ತದೆ. ಈ ರೂ.5 ಸಾವಿರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ. ಮಹಿಳೆಯರ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ ಜಮಾ ಮಾಡಲಾಗಿದೆ. ಒಟ್ಟು ಹಣ ಮೂರು ಕಂತುಗಳಲ್ಲಿ ಬರುತ್ತದೆ.
ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ? :
ಈ ಯೋಜನೆಗೆ ಸೇರಲು ನೀವು ನೇರವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇಲ್ಲದಿದ್ದರೆ ನಿಮ್ಮ ಆಶಾ ಕಾರ್ಯಕರ್ತೆಯರು ನಿಮ್ಮನ್ನು ಈ ಯೋಜನೆಗೆ ದಾಖಲಿಸುತ್ತಾರೆ.
ಮೊದಲಿಗೆ ಯೋಜನೆಗೆ ನೊಂದಾಯಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://pmmvy.wcd.gov.in/#featured-services ಹೋಗಬಹುದು. ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಅದು ನಿಮ್ಮನ್ನು ನೇರವಾಗಿ ಮಾತೃ ವಂದನ ವೆಬ್ಸೈಟ್ಗೆ ಕರೆದೊಯ್ಯುತ್ತದೆ. ಅಲ್ಲಿ ಸಿಟಿಜನ್ ಲಾಗಿನ್ ಮೇಲೆ ಕ್ಲಿಕ್ ಮಾಡಿ, ಬಳಿಕ ಆ ಲಿಂಕ್ ಇನ್ನೊಂದು ಮುಖಪುಟಕ್ಕೆ ಕರೆದೊಯ್ಯುತ್ತದೆ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ವೆರಿಫೈ ಮಾಡಿಕೊಳ್ಳಬೇಕು, ಬಳಿಕ ನಿಮ್ಮ ಹೆಸರು, ರಾಜ್ಯ, ಜಿಲ್ಲೆ, ನಗರ ಅಥವಾ ಗ್ರಾಮ, ವಾರ್ಡ್, ಅಪ್ಲೈ ಮಾಡುತ್ತಿರುವುದು ಯಾರು ಎಂಬ ಆಯ್ಕೆಗಳನ್ನು ಮಾಡಬೇಕು ಬಳಿಕ ಅಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ ಬಳಿಕ ನೀವು ಲಾಗಿನ್ ಮಾಡಿ ನೋಂದಾಯಿಸಿಕೊಳ್ಳ ಬಹುದು
ಯೋಜನೆಯ ಅರ್ಹತೆ :
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಸೇರಲು ಕೆಲವು ಅರ್ಹತೆಗಳಿವೆ.
– ಈ ಯೋಜನೆಯು ಎಲ್ಲಾ ಗರ್ಭಿಣಿಯರಿಗೆ ಅನ್ವಯಿಸುತ್ತದೆ.
– ಮೊದಲ ಗರ್ಭಧಾರಣೆಗೆ ಮಾತ್ರ ಯೋಜನೆಯಡಿ ಹಣ ಸಿಗುತ್ತದೆ.
– ಈ ಯೋಜನೆಯು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುತ್ತದೆ
ಇದನ್ನೂ ಓದಿ: Gadag: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ ; ಕೊಲೆಗೆ ಸುಪಾರಿ ನೀಡಿದ್ದು ಯಾರು ಗೊತ್ತೇ?
ಯಾವ ದಾಖಲೆಗಳ ಅಗತ್ಯವಿದೆ?
– ನೀವು ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಬಯಸಿದರೆ. LMP ದಿನಾಂಕವು ಖಂಡಿತವಾಗಿಯೂ ಅಗತ್ಯವಿದೆ.
– MCP ಕಾರ್ಡ್ ಕೂಡ ಹೊಂದಿರಬೇಕು.
– ಇವುಗಳನ್ನು ಪಡೆಯಲು ನಿಮ್ಮ ಆಶಾ ಕಾರ್ಯಕರ್ತೆಯರನ್ನು ಕೇಳಬೇಕು. ಇವುಗಳಿದ್ದರೆ ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಈ ಯೋಜನೆ ಇವರಿಗೆ ಅನ್ವಯಿಸುವುದಿಲ್ಲ :
ಮಾತೃ ವಂದನಾ ಯೋಜನೆ ಕೆಲವು ಜನರಿಗೆ ಅನ್ವಯಿಸುವುದಿಲ್ಲ. ಎಂಬುದನ್ನು ಗಮನಿಸಬೇಕು. ಎರಡನೇ ಮಗುವಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಹೀಗಾಗಿ ಹಣ ಬರುವುದಿಲ್ಲ. ಅಲ್ಲದೆ, ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕೆಲಸ ಮಾಡುವವರಿಗೆ ಅನ್ವಯಿಸುವುದಿಲ್ಲ. ಅಂದರೆ ಮಹಿಳೆಯರು ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದರೆ, ಅವರಿಗೆ ಈ ಯೋಜನೆಗೆ ಸೇರಲು ಅವಕಾಶವಿರುವುದಿಲ್ಲ.
