5
Uttar Pradesh: ಇತ್ತೀಚೆಗಷ್ಟೇ ಸುದ್ದಿಯಲ್ಲಿದ್ದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಷಯ ಎಲ್ಲರಿಗೂ ಗೊತ್ತೇ ಇರುವಂತದ್ದು, ಈಗ ಅದೇ ರೀತಿಯ ಇನ್ನೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ದಾಖಲಾಗಿದೆ.
ಮೈಂಪುರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಮಗನ 130 ಅಶ್ಲೀಲ ವಿಡಿಯೋಗಳು ಇದೀಗ ವೈರಲ್ ಆಗಿವೆ. ಹಾಗೂ ತನ್ನ ಗಂಡನಿಗೆ ಅಕ್ರಮ ಸಂಬಂಧ ಇದ್ದುದಾಗಿಯೂ, ಅದನ್ನು ಹಿಡಿಕೊಂಡು ತಮಗೆ ಬ್ಲಾಕ್ಮೇಲ್ ಮಾಡುತ್ತಿರುವುದಾಗಿಯೂ ಆರೋಪಿಯ ಪತ್ನಿ ತಿಳಿಸಿದ್ದಾರೆ.
ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ಹಲವರು ಟೀಕಾ ಪ್ರಹಾರ ನಡೆಸುತ್ತಿದ್ದು, ಅಖಿಲೇಶ್ ಯಾದವ್ ಇದೇನಾ ಬಿಜೆಪಿಯ ನಾರಿ ವಂದನಾ ಅಭಿಯಾನ ಎಂದು ಟೀಕೆ ಮಾಡಿದ್ದಾರೆ.
