Home » Prajwal Revanna: ವಿದೇಶದಲ್ಲಿ ಇದ್ರೂ ಬಿಡ್ತಾ ಇಲ್ಲ ಪ್ರಜ್ವಲ್ ರೇವಣ್ಣ- ಅಲ್ಲಿಂದಲೇ ಆಕೆಗೆ ಕರೆ – ಯಾರಾ ಯುವತಿ ?!

Prajwal Revanna: ವಿದೇಶದಲ್ಲಿ ಇದ್ರೂ ಬಿಡ್ತಾ ಇಲ್ಲ ಪ್ರಜ್ವಲ್ ರೇವಣ್ಣ- ಅಲ್ಲಿಂದಲೇ ಆಕೆಗೆ ಕರೆ – ಯಾರಾ ಯುವತಿ ?!

by ಹೊಸಕನ್ನಡ
1 comment
Prajwal Revanna Case

Prajwal Revanna: ದೇಶದೆಲ್ಲೆಡೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಹುಡುಕಾಟದ ಕಾತುರದ ಮಧ್ಯೆ ಇದೀಗ ಮೂಲಗಳಿಂದ ಆಶ್ಚರ್ಯದ ಮಾಹಿತಿ ಹೊರಬಿದ್ದಿದೆ. ಈಗಾಗಲೇ ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಯಾರೊಂದಿಗೂ ಸಂಪರ್ಕದಲ್ಲಿಲ್ಲದಿದ್ದರೂ, ಆ ಒಂದು ನಂಬರ್‌ಗೆ ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರಂತೆ. ಹಾಗಿದ್ದರೆ ಆ ನಂಬರ್ ಯಾರದ್ದು ಅನ್ನುವ ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಷ್ಟಕ್ಕೂ ಪ್ರಜ್ವಲ್ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿರುವುದು ಬೇರೆ ಯಾರಿಗೂ ಅಲ್ಲ, ತಾನು ಮದುವೆ ಆಗಬೇಕು ಅಂದುಕೊಂಡಿದ್ದ ಭಾವಿ ಪತ್ನಿಗೆ ಎಂದು ಮೂಲಗಳು ತಿಳಿಸಿವೆ. ಹೌದು, ಇದೇ ತಿಂಗಳಲ್ಲಿ ಪ್ರಜ್ವಲ್ ಆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡ್ಕೋಬೇಕು ಅಂದುಕೊಂಡಿದ್ದರಂತೆ, ಅಲ್ಲದೇ ಆ ಹುಡುಗಿಗೆ ದಿನಕ್ಕೆರಡು ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಎಸ್‌ಐಟಿ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದು, ಆ ಮೂಲಕ ಪ್ರಜ್ವಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆಯುತ್ತಿದೆ.

ಸದ್ಯ ಪ್ರಜ್ವಲ್‌ ಯುಎಇಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಂದು (ಮೇ 5) ಮಂಗಳೂರು ವಿಮಾನ ನಿಲ್ದಾಣಕ್ಕೆ (Mangaluru Airport) ಪ್ರಜ್ವಲ್‌ ಆಗಮಿಸುವ ಸಾಧ್ಯತೆಯಿದ್ದು, ಲುಕೌಟ್‌ ನೋಟಿಸ್‌ ಜಾರಿಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ವಲಸೆ ಕೇಂದ್ರದ ಬಳಿಯೇ ಬಂಧನವಾಗುವ ಸಾಧ್ಯತೆಯಿದೆ.

ಮಾಹಿತಿ ಪ್ರಕಾರ, ಅಬುಧಾಬಿಯಿಂದ ಬೆಳಗ್ಗೆ 6:24ಕ್ಕೆ ಆಗಮಿಸಿದ ವಿಮಾನಲ್ಲಿ ಪ್ರಜ್ವಲ್‌ ಪತ್ತೆಯಿಲ್ಲ. ದುಬೈನಿಂದ ಆಗಮಿಸುವ 2ನೇ ವಿಮಾನ ಬೆಳಗ್ಗೆ 7:55ಕ್ಕೆ ಲ್ಯಾಂಡ್‌ ಆಗಲಿದೆ. ದುಬೈನಿಂದ ಸಂಜೆ 6:15ಕ್ಕೆ ಮತ್ತೊಂದು ವಿಮಾನ ಬರಲಿದೆ. ಕುವೈಟ್‌ನಿಂದ 6:40ಕ್ಕೆ ವಿಮಾನ ಬರಲಿದೆ. ಈ ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಪ್ರಜ್ವಲ್‌ ಬಂದು ಶರಣಾಗಬಹುದು ಎಂದು ಎಸ್‌ಐಟಿ ನಿರೀಕ್ಷೆ ಇಟ್ಟುಕೊಂಡಿದೆ.

ಇದನ್ನೂ ಓದಿ: ರೇವಣ್ಣ ಅವರೆ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿಸಿದ್ದು, ಹೊಸ ಬಾಂಬ್ ಸಿಡಿಸಿದ A2 ಆರೋಪಿ !!

You may also like

Leave a Comment