Home » Prajwal Revanna: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ವಿಧಿಸಿದ 480 ಪುಟಗಳ ತೀರ್ಪಿನಲ್ಲಿ ಸಂಸ್ಕೃತ ಶ್ಲೋಕ ಉಲ್ಲೇಖ, ಏನದು? ಅದರ ಮಹತ್ವವೇನು?

Prajwal Revanna: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ವಿಧಿಸಿದ 480 ಪುಟಗಳ ತೀರ್ಪಿನಲ್ಲಿ ಸಂಸ್ಕೃತ ಶ್ಲೋಕ ಉಲ್ಲೇಖ, ಏನದು? ಅದರ ಮಹತ್ವವೇನು?

0 comments
Prajwal Revanna

Prajwal Revanna: ಪ್ರಜ್ವಲ್‌ ರೇವಣ್ಣ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ನೀಡಿದ್ದು, ಆದೇಶದ ಮೊದಲ ಪ್ರತಿಯಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖ ಮಾಡಲಾಗಿದೆ.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
ಯತ್ರೈತಾಸ್ತುನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ!!
ಎಂಬ ಶ್ಲೋಕವನ್ನು ತೀರ್ಪಿನ ಆರಂಭದಲ್ಲಿ ಉಲ್ಲೇಖ ಮಾಡಲಾಗಿದೆ.

ಎಲ್ಲೆಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಲ್ಲಿ ದೇವತೆ ನೆಲೆಸುತ್ತಾಳೆ. ಅವರು ಗೌರವಿಸಲ್ಪಡದ ಸ್ಥಳದಲ್ಲಿ ಕರ್ಮಫಲಗಳು ದೊರಕುತ್ತದೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲಗೊಳ್ಳುತ್ತದೆ” ಎಂಬ ಅರ್ಥವನ್ನು ಈ ಶ್ಲೋಕ ಒಳಗೊಂಡಿದೆ.

ಇದನ್ನು ಮೊದಲಿಗೆ ಉಲ್ಲೇಖ ಮಾಡಿ ನ್ಯಾಯಾಲಯವು 480 ಪುಟಗಳ ತೀರ್ಪು ಪ್ರಕಟ ಮಾಡಿದೆ.

You may also like