Home News ಡಿಜಿಟಲ್ ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಮೊರೆ

ಡಿಜಿಟಲ್ ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಮೊರೆ

Prajwal Revanna

ಬೆಂಗಳೂರು: ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಡಿಎನ್ಎ ಮತ್ತು ಡಿಜಿಟಲ್ ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್, ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ನಿರ್ದೇಶಿಸಿದೆ.

ಶಿಕ್ಷೆ ರದ್ದು ಕೋರಿ ಪ್ರಜ್ವಲ್ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯು ನ್ಯಾ.ಎಚ್.ಪಿ.ಸಂದೇಶ್ ಮತ್ತು ಟಿ.ವೆಂಕಟೇಶ್ ನಾಯಕ್ ಅವರಿದ್ದ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು. ಪ್ರಜ್ವಲ್ ಪರ ವಕೀಲ ಸಿದ್ಧಾರ್ಥ್ ಲೂಡ್ರಾ, “ಕೆಲವು ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ,” ಎಂದರು. ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್ ಜಗದೀಶ್, “ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲಾಗುವುದು,” ಎಂದರು. ಅದನ್ನು ಆಲಿಸಿದ ನ್ಯಾಯಪೀಠವು, ”ಸಿರ್ಆಪಿಸಿ ಸೆಕ್ಷನ್ 391ರಡಿ ಕೆಲವು ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಪ್ರಜ್ವಲ್ ರೇವಣ್ಣ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ,” ಎಂದರು.