Home » Pramod Mutalik: ಹೆಣ್ಣು ಮಕ್ಕಳಿಗೆ ತ್ರಿಶೂಲ ದೀಕ್ಷೆ- ಪ್ರಮೋದ್‌ ಮುತಾಲಿಕ್‌

Pramod Mutalik: ಹೆಣ್ಣು ಮಕ್ಕಳಿಗೆ ತ್ರಿಶೂಲ ದೀಕ್ಷೆ- ಪ್ರಮೋದ್‌ ಮುತಾಲಿಕ್‌

0 comments
Pramod Mutalik

Pramod Mutalik: “ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೋಸ್ಕರ ನೂರು ಕಡೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ,” ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಲವ್ ಜಿಹಾದ್’ ಕೃತಿಯ ಎರಡನೇ ಆವೃತ್ತಿ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಹಿಂದೂಗಳನ್ನು ಸೆಳೆಯಲು ನಾನಾ ಪ್ರಯತ್ನಗಳು ನಡೆಯುತ್ತಿವೆ. 2019ರಿಂದ 2021ರವರೆಗೆ 13 ಲಕ್ಷ ಇಂತಹ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳಲ್ಲಿ 2.51 ಲಕ್ಷ ಅಪ್ರಾಪ್ತಯರು ಸಿಲುಕಿದ್ದರು.

ಶ್ರೀರಾಮ ಸೇನೆಯಿಂದ 4,700 ಮಹಿಳೆಯರನ್ನು ರಕ್ಷಿಸಲಾಗಿದೆ,” ಎಂದರು.

‘ಮಾರ್ಚ್ 30 ಹಾಗೂ ಏ.06 ರಂದು ಯುಗಾದಿ ಹಾಗೂ ರಾಮ ನವಮಿಯನ್ನು ಹಲಾಲ್ ಮುಕ್ತ ಹಬ್ಬವನ್ನಾಗಿ ಆಚರಿಸಬೇಕು. ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ರಾಜ್ಯ ಕಾಂಗ್ರೆಸ್ ಸರಕಾರ ಗುತ್ತಿಗೆ ಕೆಲಸಗಳಲ್ಲಿ ಶೇ.4ರಷ್ಟು ಅಲ್ಪ ಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಿಟ್ಟಿದ್ದು ಖಂಡನೀಯ. ಇದರ ವಿರುದ್ಧ ಶ್ರೀರಾಮ ಸಂಘಟನೆಯಿಂದ ಹೈಕೋರ್ಟ್‌ ನಲ್ಲಿ ಪಿಐಎಲ್ ಸಲ್ಲಿಸಿದೆ.

You may also like