4
Praveen Nettaru : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ವ್ಯಕ್ತಿಯ ಪತ್ನಿ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಬೂಬಕ್ಕರ್ ಸಿದ್ದಿಕ್ ಕೊಲೆಯ ಸಂದರ್ಭ ಸ್ಥಳದಲ್ಲೇ ಇದ್ದಿದ್ದು ಆರೋಪಿಗಳಿಗೆ ಸಾಥ್ ನೀಡಿರುವ ಆರೋಪ ಎದುರಿಸುತ್ತಿದ್ದು, ತಲೆಮರೆಸಿಕೊಂಡಿದ್ದಾನೆ.
ಸಹಕಾರ ನೀಡಿದ ಆರೋಪಿಯ ವ್ಯಕ್ತಿಯ ಪತ್ನಿ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮಾಡಿದ್ದಾರೆ. ಸರ್ಚ್ ವಾರೆಂಟ್ ಪಡೆದ ಎನ್‌ಐಎ ಪೊಲೀಸರು, ಸಂಪ್ಯ ಠಾಣಾ ವ್ಯಾಪ್ತಿಯ ಕೆಯ್ಯೂರಿಗೆ ಆಗಮಿಸಿ ತನಿಖೆ ಮಾಡಲು ತಯಾರಿ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಅಬೂಬಕ್ಕರ್ ಸಿದ್ದಿಕ್ ಪತ್ನಿಯ ಮನೆ ಸಂಪ್ಯ ಠಾಣಾ ವ್ಯಾಪ್ತಿಯ ಕೆಯ್ಯೂರಿನಲ್ಲಿರುವುದೆಂದು ವರದಿಯಾಗಿದೆ.
