Prayagraj: ಮಹಾಕುಂಭದಲ್ಲಿ ಸ್ನಾನ ಮಾಡುವ ಮಹಿಳೆಯರ ವೀಡಿಯೋಗಳು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಹಲವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಯರ ಚಿತ್ರಗಳು ಮತ್ತು ವೀಡಿಯೋಗಳು ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ಟೆಲಿಗ್ರಾಮ್ ಇನ್ನಿತರ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವು ಫೇಸ್‌ಬುಕ್ ಪೇಜ್‌ಗಳು ಮಹಾಕುಂಭ 2025, ಗಂಗಾಸ್ನಾನ ಮತ್ತು ಪ್ರಯಾಗ್‌ರಾಜ್ ಕುಂಭ ಇತ್ಯಾದಿ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಷೇರ್ ಮಾಡುತ್ತಿದೆ. ಇದನ್ನು ವೀಕ್ಷಿಸಲು ರೂ.1,999, 3000 ರೂ. ಗಳವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಥ ವೀಡಿಯೋಗಳ ಚಿತ್ರೀಕರಣ, ವೀಡಿಯೋ ಹಂಚಿಕೆ, ಖರೀದಿ ಮಾಡಿದವರನ್ನು ಬಂಧನ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
