8
Sullia: ಸುಳ್ಯದ (Sullia) ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ ತಿಂಗಳ 15 ರಿಂದ 18 ರ ತನಕ ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿಯಾಗಿ (ಕೂವಂ ಅಳಕ್ಕಲ್) ಭತ್ತ ಅಳೆಯುವ ಹಾಗೂ ವೀಳ್ಯ ಕೊಡುವ ಕಾರ್ಯಕ್ರಮ ಫೆ.20 ರಂದು ನಡೆಯಿತು.
ದೈವಸ್ಥಾನದಲ್ಲಿ ಬೆಳಗ್ಗೆ ದೈವದ ದರ್ಶನ ಪಾತ್ರಿಯವರಿಂದ ಸಾಮೂಹಿಕ ಪ್ರಾರ್ಥನೆಯು ನೆರವೇರಿತು.ಬಳಿಕ ಶ್ರೀ ದೈವದ ದರ್ಶನ ಪಾತ್ರಿಯವರ ನೇತೃತ್ವದಲ್ಲಿ ದರ್ಶನ ಸೇವೆಯು ನಡೆದು ಶುಭ ಮುಹೂರ್ತದಲ್ಲಿ (ಕೂವಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯವನ್ನು ಪೂರ್ವಸಂಪ್ರದಾಯದಂತೆ ನೆರವೇರಿಸಲಾಯಿತು.
