Home » ಕಲಿಯುಗದ ಅಂತ್ಯ ಮುಂದಿನ 6 ವರ್ಷದಲ್ಲಿ ; ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ

ಕಲಿಯುಗದ ಅಂತ್ಯ ಮುಂದಿನ 6 ವರ್ಷದಲ್ಲಿ ; ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ

0 comments

ಪ್ರಪಂಚದ ಆಗು ಹೋಗುಗಳನ್ನು ಪ್ರಕೃತಿ ಕೆಲವೊಂದು ಬದಲಾವಣೆಗಳ ಮೂಲಕ ನಮಗೆ ತಿಳಿಸಿ ಕೊಡುತ್ತಲೇ ಬಂದಿದೆ. ಎಷ್ಟೋ ಶಾಸ್ತ್ರ ಪುರಾಣಗಳು ಹಿಂದಿನ ಘಟನೆಗಳಿಗೆ ಸಾಕ್ಷಿ ನೀಡಿ ಮುಂದಿನ ಘಟನೆಗಳಿಗೆ ಮುನ್ನುಡಿ ಬರೆದಿದೆ. ಪ್ರಪಂಚ ಎಷ್ಟೇ ಆಧುನಿಕತೆ ಹೊಂದಿದರು ಸಹ ಶಾಸ್ತ್ರಗಳನ್ನು ಅಲ್ಲಗಳೆಯುವಂತೆ ಇಲ್ಲ. ಶಾಸ್ತ್ರ ಪ್ರಕಾರ ತಿಳಿಸಿದ ಎಷ್ಟೋ ಘಟನೆಗಳು ಘಟಿಸಿದ ನಿದರ್ಶನಗಳಿವೆ. ಹಾಗೆಯೇ ಶಾಸ್ತ್ರ ತಜ್ಞರುಗಳಾದ ಬ್ರಹ್ಮಾಂಡ ಗುರೂಜಿ ಅವರು ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಭಯಂಕರ ಭವಿಷ್ಯ ನುಡಿದಿದ್ದಾರೆ.

ಚಿಕ್ಕಮಂಗಳೂರಿನ ನಗರದಲ್ಲಿ ಜನಜಾಗೃತಿ ಧರ್ಮಸಭೆಯಲ್ಲಿ ಹಿತವಚನಗಳನ್ನು ಮಾತನಾಡಿದ ಅವರು ಮನುಷ್ಯನ ಅಂತ್ಯ ಎಂದಲ್ಲ ಆದರೆ ಸಂಧಿಕಾಲದಲ್ಲಿ ಸತ್ಯಯುಗ ಆರಂಭಗೊಳ್ಳಲಿದೆ ಎಂದಿದ್ದಾರೆ. ದೇಶಕ್ಕೆ ಇಬ್ಬರು ಪ್ರದಾನಿ ಮತ್ತು ರಾಷ್ಟ್ರಪತಿಗಳು ಇರಲಿದ್ದಾರೆ ಎಂದರು.

ಶಾಸನದ ಪ್ರಕಾರ ಇನ್ನು ಆರು ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಜನರಿಗೆ ಕೊಂಚ ನಿಟ್ಟುಸಿರುಬಿಟ್ಟ ಹಾಗೆ ಆಗಿದೆ. ಸಂಧಿಕಾಲ ಅನ್ನೋದು 25 ವರ್ಷ ಇರುತ್ತದೆ. ಮತ್ತು ಸತ್ಯಯುಗ ಶುರುವಾಗತ್ತದೆ. ಇವೆರಡು ಸೇರಿ 31 ವರ್ಷ ಆಗುತ್ತದೆ. ಹೀಗಾಗಿ ಇಂದಿನ ಜಗನ್ಮಾತೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.

ಶಾಸನಗಳು, ಇತಿಹಾಸಗಳು, ಯಾವುದೊ ಒಂದು ಆಧಾರದ ಅನುಸಾರ ಮುಂದಿನ ಗತಿಗಳ ಬಗೆಗೆ ತಿಳಿಸಿ ಕೊಡುತ್ತಲಿವೆ. ಸತ್ಯಾ ಸತ್ಯತೆಗಳನ್ನು ಸಮಯ ಬಂದಾಗಲೇ ಅರಿತುಕೊಳ್ಳಲು ಸಾಧ್ಯ.

You may also like

Leave a Comment